ನವದೆಹಲಿ (ಪಿಟಿಐ): ಬೆಂಗಳೂರಿನಲ್ಲಿ ನಡೆಯಲಿರುವ ಏರೊ–ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ, ಅಮೆರಿಕದ ಲಾಕ್ಹೀಡ್ ಮಾರ್ಟಿನ್ ಕಂಪನಿಯು ಎಫ್–21 ಯುದ್ಧ ವಿಮಾನ, ಎಸ್–92 ಬಹುಪಯೋಗಿ ಹೆಲಿಕಾಪ್ಟರ್, ಎಂಎಚ್ –60 ಆರ್ ಮಲ್ಟಿ ಮಿಷನ್ ವಿಮಾನ ಸೇರಿದಂತೆ ಅತ್ಯಾಧುನಿಕ ವಿಮಾನಗಳನ್ನು ಪ್ರದರ್ಶಿಸಲಿದೆ.

ಯಲಹಂಕದಲ್ಲಿರುವ ವಾಯುನೆಲೆಯ ಆವರಣದಲ್ಲಿ ಫೆ. 13ರಿಂದ 17ರ ವರೆಗೆ 14ನೇ ಏರೊ–ಇಂಡಿಯಾ ಪ್ರದರ್ಶನ ನಡೆಯಲಿದೆ. ಇದು ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಎಂದೇ ಹೆಸರಾಗಿದೆ.

ಜಗತ್ತಿನ ಪ್ರಖ್ಯಾತ ರಕ್ಷಣಾ ಸಲಕರಣೆಗಳ ಅಭಿವೃದ್ಧಿ ಕಂಪನಿಗಳು ಭಾಗಿಯಾಗುವ ನಿರೀಕ್ಷೆ ಇದ್ದು, ಒಟ್ಟು 35,000 ಚದರ ಅಡಿ ಪ್ರದೇಶದಲ್ಲಿ ಪ್ರದರ್ಶನ ನಡೆಯಲಿದೆ.

‘ಅತ್ಯಾಧುನಿಕ ಸಾಮರ್ಥ್ಯವನ್ನು ಪ್ರದರ್ಶಿಸಲು ಏರೋ–ಇಂಡಿಯಾ 2023ರಲ್ಲಿ ಪಾಲ್ಗೊಳ್ಳಲು ನಾವು ಉತ್ಸುಕರಾಗಿದ್ದೇವೆ’ ಎಂದು ಲಾಕ್ಹೀಡ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ವಿಲಿಯಮ್ ಬ್ಲೇರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.