ನವದೆಹಲಿ: ‘ಬಾಲಾಪರಾಧಿಗಳನ್ನು ವಯಸ್ಕರಿರುವ ಜೈಲಿಗೆ ದಾಖಲು ಮಾಡುವುದು ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣ ಮಾಡಿದಂತೆ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

‘ಮಗುವು ಒಮ್ಮೆ ವಯಸ್ಕ ಅಪರಾಧ ನ್ಯಾಯ ವ್ಯವಸ್ಥೆಯಡಿ ಸಿಲುಕಿಕೊಂಡರೆ ಅದರಿಂದ ಪಾರಾಗುವುದು ಕಷ್ಟ’ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಜೆ.ಬಿ.ಪರ್ದಿವಾಲಾ ಅವರಿದ್ದ ದ್ವಿಸದಸ್ಯ ಪೀಠ ಮಂಗಳವಾರ ಹೇಳಿದೆ.

‘ಮಕ್ಕಳಿಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಕುರಿತ ಅರಿವಿನ ಕೊರತೆ ಇದೆ. ಕಾನೂನು ನೆರವು ಕಾರ್ಯಕ್ರಮಗಳು ಮೂಲೆಗೆ ಸರಿದಿವೆ. ಇದು ಕಹಿ ಸತ್ಯ’ ಎಂದು ನ್ಯಾಯಪೀಠ ತಿಳಿಸಿದೆ.

ಕೊಲೆ ಆರೋಪದಡಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ವಿನೋದ್ ಕತಾರಾ ಎಂಬಾತ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಅಪರಾಧ ನಡೆದಾಗ ಆತನ ವಯಸ್ಸು ಎಷ್ಟಿತ್ತು ಎಂಬುದನ್ನು ಪತ್ತೆಹಚ್ಚಲು ಸಿವಿಲ್ ಆಸ್ಪತ್ರೆಯಲ್ಲಿ ಆತನನ್ನು ಮೂಳೆಯ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿತು. ವಿಕಿರಣಶಾಸ್ತ್ರಜ್ಞ ಸೇರಿ ಒಟ್ಟು ಮೂವರು ವೈದ್ಯರ ತಂಡವನ್ನು ನಿಯೋಜಿಸುವಂತೆಯೂ ನಿರ್ದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.