ನವದೆಹಲಿ: ಕಾಂಗ್ರೆಸ್ ಪಕ್ಷದ ಚುನಾವಣಾ ವಿಚಾರವು ಅಭಿವೃದ್ಧಿಯಿಂದ ಅಲ್ಪಸಂಖ್ಯಾತರು ಮತ್ತು ದಲಿತರಲ್ಲಿ ಭೀತಿ ಹುಟ್ಟಿಸುವತ್ತ ಹೊರಳಿಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್ ಪಕ್ಷವು ರಾಜಕೀಯ ಸಂವಾದವನ್ನು ಸಾರ್ವಕಾಲಿಕ ತಳಕ್ಕೆ ಕೊಂಡೊಯ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ 56 ಬಯ್ಗುಳಗಳನ್ನು ಉಪಯೋಗಿಸಿದೆ ಎಂದು ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಹೇಳಿದ್ದಾರೆ.

‘ಐದು ವರ್ಷಗಳಲ್ಲಿ ನಮ್ಮ ಸರ್ಕಾರದ ಸಾಧನೆ ಮತ್ತು ನೀತಿಗಳು ಈ ಚುನಾವಣೆಯ ಮುಖ್ಯ ಕಾರ್ಯಸೂಚಿ ಆಗಬೇಕಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಪ್ರಧಾನಿಯ ವಿರುದ್ಧ ಕೆಟ್ಟ ಹೇಳಿಕೆಗಳನ್ನು ನೀಡಿತು. ಅಲ್ಪಸಂಖ್ಯಾತರು ಮತ್ತು ದಲಿತರ ಮನದಲ್ಲಿ ಭೀತಿಯನ್ನು ಹುಟ್ಟಿಸಿತು. ಹಾಗಾಗಿ, ನಮ್ಮ ಸಾಧನೆ ಚುನಾವಣಾ ವಿಚಾರವೇ ಆಗಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜೀವ್ ಗಾಂಧಿ, 1984ರ ಸಿಖ್ ವಿರೋಧಿ ಗಲಭೆ ಮತ್ತು ಬೊಫೋರ್ಸ್ ಪ್ರಕರಣದ ಆಧಾರದಲ್ಲಿ ಮುಂದಿನ ಹಂತಗಳ ಮತದಾನ ಎದುರಿಸುವಂತೆ ಮೋದಿ ಅವರು ಹೇಳಿದ ಎರಡು ದಿನಗಳ ಬಳಿಕ ಗಡ್ಕರಿ ಅವರು ಈ ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.