ನವದೆಹಲಿ:ಬಿಜೆಪಿ ಆಳ್ವಿಕೆ ಇದ್ದಾಗ ಕೋಮು ಸಂಘರ್ಷಗಳು ನಡೆಯುವುದಿಲ್ಲ. ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಹತ್ತಾರು ಕ್ರಮಗಳನ್ನು ಬಿಜೆಪಿ ಸರ್ಕಾರಗಳು ಕೈಗೊಂಡಿವೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಹೀಗಿದ್ದರೂ ವಿರೋಧ ಪಕ್ಷಗಳು ಬಿಜೆಪಿಯ ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ ಎಂದು ಅವರು ಹರಿಹಾಯ್ದಿದ್ದಾರೆ.

ಮೇ 26ರಂದು ಮತ ಎಣಿಗೆ ಮುಗಿದಾಗ ತಮ್ಮ ಪಕ್ಷವು ಅಮೋಘ ಗೆಲುವು ಸಾಧಿಸಲಿದೆ. ವಿರೋಧ ಪಕ್ಷಗಳು ದೂಳೀಪಟವಾಗಲಿವೆ ಎಂದು ಶಾ ಹೇಳಿದ್ದಾರೆ.ಚುನಾವಣಾ ವೇಳಾಪಟ್ಟಿಯನ್ನು ಆಯೋಗವು ಇನ್ನಷ್ಟೇ ಪ್ರಕಟಿಸಬೇಕಿದೆ. ಜೂನ್ 3ಕ್ಕೆ ಮೊದಲು ಹೊಸ ಲೋಕಸಭೆ ಅಸ್ತಿತ್ವ ಬರಬೇಕಿದೆ. 2014ರ ಮೇ 26ರಂದು ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಇದನ್ನೂ ಓದಿ:ಮತಯಂತ್ರ ವಿರುದ್ಧ ಕಾರ್ಯತಂತ್ರ: ಬಿಜೆಪಿ ವಿರೋಧಿಗಳ ಸಭೆ ಶುಕ್ರವಾರ

ಬಿಜೆಪಿ ಆಯೋಜಿಸಿರುವ ಎರಡು ದಿನಗಳ ಅಲ್ಪಸಂಖ್ಯಾತರ ರಾಷ್ಟ್ರೀಯ ಸಮ್ಮೇಳನದಲ್ಲಿ ಶಾ ಮಾತನಾಡಿದರು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ವರ್ಗಗಳನ್ನು ತಲುಪಲು ಕಾರ್ಯಕ್ರಮಗಳನ್ನು ಆಯೋಜಿಸಲು ಬಿಜೆಪಿ ನಿರ್ಧರಿಸಿದೆ. ಅದರ ಭಾಗವಾಗಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಸಮಾವೇಶ ನಡೆಸಲಾಗಿದೆ.

ಬಿಜೆಪಿ ಮೈತ್ರಿಗೆ ವಿರೋಧ

ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವುದರ ವಿರುದ್ಧ ಎಐಎಡಿಎಂಕೆಯಲ್ಲಿ ವಿರೋಧ ಇನ್ನಷ್ಟು ತೀವ್ರಗೊಂಡಿದೆ. ಎಂ.ಜಿ. ರಾಮಚಂದ್ರನ್ ಮತ್ತು ಜಯಲಲಿತಾ ಅವರ ಸಂಪುಟದಲ್ಲಿ ಸಚಿವರಾಗಿದ್ದ ಸಿ. ಪೊನ್ನಯ್ಯನ್ ಅವರು ಮೈತ್ರಿಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ತಮಿಳುನಾಡಿನ ಜನತೆಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ಅಂತಹ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳಲು ಪಕ್ಷದ ಕಾರ್ಯಕರ್ತರು ಸಿದ್ಧರಿಲ್ಲ ಎಂದು ಪೊನ್ನಯ್ಯನ್ ಹೇಳಿದ್ದಾರೆ.

ಎಐಎಡಿಎಂಕೆ ಹಿರಿಯ ಮುಖಂಡ, ಲೋಕಸಭೆಯ ಉಪ ಸ್ಪೀಕರ್ ಎಂ. ತಂಬಿದೊರೆ ಅವರು ಬಿಜೆಪಿ ಜತೆಗಿನ ಮೈತ್ರಿಗೆ ಈ ಮೊದಲೇ ವಿರೋಧ ವ್ಯಕ್ತಪಡಿಸಿದ್ದರು.

ಮೈತ್ರಿಗೆ ಪಕ್ಷದ ವೇದಿಕೆಯಲ್ಲಿ ಮೊದಲಿನಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ವಿರೋಧ ಬಹಿರಂಗವಾಗಿಯೇ ವ್ಯಕ್ತವಾಗುತ್ತಿದೆ.

ಬಿಜೆಪಿ ಆಡಳಿತದ 16 ರಾಜ್ಯಗಳ ಪೈಕಿ ಯಾವುದರಲ್ಲಿಯೂ ಕೋಮು ಗಲಭೆಗಳಿಲ್ಲ. ಕಾಂಗ್ರೆಸ್, ಎಸ್ಪಿ, ಬಿಎಸ್ಪಿ ಪಕ್ಷಗಳ ಆಳ್ವಿಕೆ ಕೊನೆಯಾಗುವುದರೊಂದಿಗೆ ಕೋಮು ಸಂಘರ್ಷವೂ ಕೊನೆಯಾಯಿತು

–ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.