ಭೋಪಾಲ್( ಮಧ್ಯಪ್ರದೇಶ): ಮಧ್ಯಪ್ರದೇಶದ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಒಟ್ಟು ಎಂಟು ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಹವಾಮಾನ ವೈಪರೀತ್ಯದಿಂದಾಗಿ ಕೆಲವು ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಹೀಗಾಗಿ ಶೇಕಡವಾರು ಮತದಾನದ ಮೇಲೆ ಪರಿಣಾಮ ಬೀರಲಿದೆ ಎಂದು ಚುನಾವಣಾಧಿಕಾರಿಯೊಬ್ಬರು ಸೋಮವಾರ ತಿಳಿಸಿದೆ.
.Lok Sabha Elections Live |ಬಹುತೇಕ ಶಾಂತಿಯುತವಾಗಿ ಕೊನೆಗೊಂಡ 4ನೇ ಹಂತ; ಶೇ 62.8ರಷ್ಟು ಮತದಾನ.Photos | ಲೋಕಸಭಾ ಚುನಾವಣೆಯ ನಾಲ್ಕನೇ ಹಂತ: ಮತ ಹಬ್ಬದ ಸಂಭ್ರಮ.
ಚುನಾವಣಾ ಅಧಿಕಾರಿಗಳ ಪ್ರಕಾರ, ದೇವಾಸ್, ಉಜ್ಜಯಿನಿ, ಮಂಡ್‌ಸೋರ್, ರತ್ಲಾಮ್, ಧಾರ್, ಇಂದೋರ್, ಖಾರ್ಗೋನೆ ಮತ್ತು ಖಾಂಡ್ವಾ ಲೋಕಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ11 ರವರೆಗೆ ಸರಾಸರಿ ಶೇಕಡಾ 32.38 ರಷ್ಟು ಮತದಾನವಾಗಿದೆ.

ಮೊದಲ ಮೂರು ಹಂತಗಳಲ್ಲಿ ಮತದಾನ ನಡೆದ 21 ಕ್ಷೇತ್ರಗಳಲ್ಲಿ ಶೇ.64.76ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗ ಹಾಗೂ ಇತರೆ ಸರ್ಕಾರಿ ಸಂಸ್ಥೆಗಳು ಸಹ ಹೆಚ್ಚು ಮತದಾನವಾಗಲು ಪ್ರಯತ್ನಿಸಿದೆ ಎಂದು ಮಧ್ಯಪ್ರದೇಶ ಚುನಾವಣಾಧಿಕಾರಿ ಅನುಪಮ್ ರಾಜನ್ ಹೇಳಿದ್ದಾರೆ.
.VIDEO | ಪ್ರಜ್ವಲ್ ಪ್ರಕರಣ: ಸರ್ಕಾರಿ ನಿವಾಸಕ್ಕೆ ಎಫ್ಎಸ್ಎಲ್ ತಂಡ ಭೇಟಿ.
ಖಾರ್‌ಗೋನ್, ಖಾಂಡ್ವಾ, ಬರ್ವಾನಿ, ಅಲಿರಾಜ್‌ಪುರ, ಝಬುವಾ, ಧಾರ್, ಇಂದೋರ್, ರತ್ಲಾಮ್, ಉಜ್ಜಯಿನಿ, ದೇವಾಸ್, ಶಾಜಾಪುರ, ಮಂದಸೌರ್ ಮತ್ತು ನೀಮುಚ್‌ಗಳಲ್ಲಿ ಇಂದು (ಸೋಮವಾರ) ಮತ್ತು ನಾಳೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಭೋಪಾಲ್‌ನ ಹಿರಿಯ ಹವಾಮಾನಶಾಸ್ತ್ರಜ್ಞ ಅಭಿಜಿತ್ ಚಕ್ರೋಬರ್ತಿ ತಿಳಿಸಿದ್ದಾರೆ.
.ಬಿಹಾರ | ಪಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ.ಕೇಜ್ರಿವಾಲ್ ಆಪ್ತ ಸಿಬ್ಬಂದಿಯಿಂದ ಅನುಚಿತ ವರ್ತನೆ: ಸ್ವಾತಿ ಮಲಿವಾಲ್ ಆರೋಪ.
ಇಂದೋರ್ ಹೊರತುಪಡಿಸಿ ದೇವಾಸ್, ಉಜ್ಜಯಿನಿ, ರಾಲ್ಟಮ್, ಧಾರ್, ಖಾರ್‌ಗೋನ್, ಖಾಂಡ್ವಾ ಮತ್ತು ಮಂದಸೌರ್‌ನಲ್ಲಿ ಕಳೆದ 24 ಗಂಟೆಗಳ ಕಾಲ ಮಳೆಯಾಗಿದ್ದು, ಬೆಳಗ್ಗೆ 8.30 ಸುಮಾರಿಗೆ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಖಾಂಡ್ವಾ, ಖಾರ್‌ಗೋನ , ಬರ್ವಾನಿ ಮತ್ತು ಬುರ್ಹಾನ್‌ಪುರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಿರುವ ಕುರಿತು ವರದಿಯಾಗಿದೆ. ಮತದಾನಕ್ಕೆ ವಿದ್ಯುತ್ ಅಡಚಣೆಯಾಗಿರುವುದಾಗಿ ಈವರೆಗೂ ಮಾಹಿತಿ ಬಂದಿಲ್ಲ ಎಂದು ಚುನಾವಣಾಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.