ನವದೆಹಲಿ: ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಈ ವರ್ಷದ ಏಪ್ರಿಲ್ ಮತ್ತು ಜುಲೈ ನಡುವೆ 30 ದೂರುಗಳನ್ನು ಲೋಕಪಾಲ ಕಚೇರಿ ಸ್ವೀಕರಿಸಿದೆ.

ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ 12 ಹಾಗೂ ಜುಲೈನಲ್ಲಿ 18 ದೂರುಗಳು ಸ್ವೀಕಾರವಾಗಿವೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.

ಒಟ್ಟು 30 ದೂರುಗಳ ಪೈಕಿ 18 ದೂರುಗಳು ‘ಎ’ ಅಥವಾ ‘ಬಿ’ ಗ್ರೂಪ್ ಅಧಿಕಾರಿಗಳಿಗೆ ಸಂಬಂಧಿಸಿದ್ದಾಗಿವೆ. ಕೇಂದ್ರ ಸರ್ಕಾರದ ಪೂರ್ಣ ಅಥವಾ ಭಾಗಶಃ ನಿಯಂತ್ರಣದಲ್ಲಿರುವ ಸಂಸ್ಥೆ, ಮಂಡಳಿ, ಪ್ರಾಧಿಕಾರ, ಕಂಪನಿ, ಟ್ರಸ್ಟ್‌ನ ಅಧ್ಯಕ್ಷ/ ಸದಸ್ಯ/ಅಧಿಕಾರಿ/ಸಿಬ್ಬಂದಿ ವಿರುದ್ಧ 12 ದೂರುಗಳು ಸ್ವೀಕಾರವಾಗಿವೆ.

2019–20ರಲ್ಲಿ 1,427 ದೂರುಗಳನ್ನು ಸ್ವೀಕರಿಸಿದ್ದ ಲೋಕಪಾಲ ಸಂಸ್ಥೆಯು 2020–21ರಲ್ಲಿ 110 ದೂರುಗಳನ್ನು ಸ್ವೀಕರಿಸಿತ್ತು. ಅಂದರೆ ಶೇ 92ರಷ್ಟು ಇಳಿಕೆ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.