ಭೋಪಾಲ್: ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸುತ್ತಿರುವುದರಿಂದ ಒತ್ತಡಕ್ಕೆ ಒಳಗಾಗಿದ್ದ 10ನೇ ತರಗತಿ ವಿದ್ಯಾರ್ಥಿ ಮಧ್ಯಪ್ರದೇಶದ ಛತ್ತರ್‌ಪುರ ನಗರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

17 ವರ್ಷದ ಬಾಲಕ ಮಂಗಳವಾರ ಮಧ್ಯರಾತ್ರಿ ಹನುಮಾನ್ ಟೋರಿಯಾ ಪ್ರದೇಶದ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅನುಪ್ ಯಾದವ್ ಹೇಳಿದ್ದಾರೆ.

ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಬಾಲಕನಿಗೆ ಮಂಗಳವಾರ ಗಣಿತ ಪರೀಕ್ಷೆ ಇತ್ತು. ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದ ಆತ ಪರೀಕ್ಷೆಯ ದಿನದಂದು ಬೇಗ ಏಳಲು ಬೆಳಿಗ್ಗೆ 5 ಗಂಟೆಗೆ ಅಲಾರಾಂ ಇಟ್ಟಿದ್ದರು ಎಂದು ಆತನ ಚಿಕ್ಕಪ್ಪ ಅನುಪಮ್ ತಾಮ್ರಕರ್ ಸುದ್ದಿಗಾರರಿಗೆ ತಿಳಿಸಿದರು.

ಬೆಳಿಗ್ಗೆ ಅಲಾರಾಂ ಬಾರಿಸಿದಾಗ, ಬಾಲಕನ ಕುಟುಂಬ ಸದಸ್ಯರು ಅವನ ಕೋಣೆಗೆ ಹೋಗಿ ನೋಡಿದಾಗ ಆತ ಸ್ಕಾರ್ಫ್‌ನೊಂದಿಗೆ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.

ಕೊರೊನಾ ವೈರಸ್ ಪ್ರೇರಿತ ನಿರ್ಬಂಧಗಳ ಹಿನ್ನೆಲೆಯಲ್ಲಿ ಬಾಲಕ ಕಳೆದ ಎರಡು ವರ್ಷಗಳಿಂದಲೂ ಆನ್‌ಲೈನ್ ತರಗತಿಗಳನ್ನು ಕೇಳುತ್ತಿದ್ದನು. ಆದರೆ ಈಗ ಭೌತಿಕ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಪರೀಕ್ಷೆ ಸ್ವರೂಪದಲ್ಲಿನ ಈ ಹಠಾತ್ ಬದಲಾವಣೆಯಿಂದಾಗಿ ಆತ ಖಿನ್ನತೆಗೆ ಒಳಗಾಗಿದ್ದ ಎಂದು ಅವರ ತಂದೆ ಅಮಿತ್ ತಾಮ್ರಕರ್ ಹೇಳಿದ್ದಾರೆ.

ಈ ಘಟನೆ ಹಿಂದಿನ ನಿಖರ ಕಾರಣ ಪತ್ತೆಹಚ್ಚಲು ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.