ನಾಗ್ಪುರ: ನಾಗ್ಪುರ ಮೂಲದ ಉದ್ಯಮಿಯೊಬ್ಬರು ಆನ್ಲೈನ್ ಜೂಜಾಟದಲ್ಲಿ ₹58 ಕೋಟಿ ಕಳೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬುಕಿ ಅನಂತ್ ಅಲಿಯಾಸ್ ಸಂತು ನವರತ್ನ ಜೈನ್ ಎಂಬುವವರ ಮನೆ ಮೇಲೆ ಶನಿವಾರ ದಾಳಿ ನಡೆಸಿರುವ ಪೊಲೀಸರು ₹14 ಕೋಟಿ ಹಣ, ನಾಲ್ಕು ಕೆ.ಜಿ ಚಿನ್ನದ ಬಿಸ್ಕತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ಮನ್ಸೂಚನೆ ಪಡೆದ ಆರೋಪಿ ಪರಾರಿಯಾಗಿದ್ದು, ದುಬೈಗೆ ಹಾರಿರುವ ಶಂಕೆ ಇದೆ.

ಆನ್ಲೈನ್ ಜೂಜಿನಲ್ಲಿ ಭಾರಿ ಹಣ ಗಳಿಸುವ ಬಗ್ಗೆ ಉದ್ಯಮಿಗೆ ಆರೋಪಿ ಜೈನ್ ಆಮಿಷವೊಡ್ಡಿದ್ದರು. ಆರಂಭದಲ್ಲಿ ಜೂಜಾಡಲು ನಿರಾಕರಿಸಿದ್ದ ಉದ್ಯಮಿ, ನಂತರ ಹವಾಲ ಮೂಲಕ ಜೈನ್ಗೆ ₹8 ಲಕ್ಷ ರವಾನಿಸಿದ್ದರು. ಹಣ ಪಡೆದ ಜೈನ್, ಉದ್ಯಮಿಯ ವಾಟ್ಸ್ಆ್ಯಪ್ಗೆ ಲಿಂಕ್ವೊಂದನ್ನು ಕಳುಹಿಸಿ, ಜೂಜಿನ ಖಾತೆ ತೆರೆಯುವಂತೆ ತಿಳಿಸಿದ್ದರು. ಖಾತೆ ತೆರೆದಾಗ ಅದರಲ್ಲಿ ₹8 ಲಕ್ಷ ಜಮೆಯಾಗಿದ್ದನ್ನು ಕಂಡು ಖುಷಿಯಾದ ಉದ್ಯಮಿ, ಜೂಜು ಆರಂಭಿಸಿದ್ದರು. ನಂತರ ಹಂತ ಹಂತವಾಗಿ ₹58 ಕೋಟಿ ನಷ್ಟ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರು ₹5 ಕೋಟಿ ಮಾತ್ರ ಗೆದ್ದಿದ್ದರು. ಆಟದ ಬಗ್ಗೆ ಅನುಮಾನಗೊಂಡ ಜೈನ್, ತಮ್ಮ ಹಣ ಹಿಂದಿರುಗಿಸುವಂತೆ ಜೈನ್ಗೆ ತಿಳಿಸಿದ್ದರು. ಹಣ ಕೊಡಲು ಜೈನ್ ನಿರಾಕರಿಸಿದ್ದರಿಂದ ಉದ್ಯಮಿಯು ಪೊಲೀಸರಿಗೆ ದೂರು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.