ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಹೇಗೆ ರಚಿಸಬೇಕು ಎಂಬ ಕುರಿತು ನಡೆದ ಸಭೆಯಲ್ಲಿ ಅದಾನಿ ಅವರೂ ಇದ್ದರು ಎಂಬುದಾಗಿ ಸಂಪುಟದ ಹಿರಿಯ ಸಚಿವರೊಬ್ಬರ ಸಂದರ್ಶನದ ಮೂಲಕ ತಿಳಿದುಬಂದಿದೆ. ಇದು ಕೆಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ: 1. ಅದಾನಿ ಅವರು ಬಿಜೆಪಿಯ ಅಧಿಕೃತ ಸಂಧಾನಕಾರರೇ? 2. ಮೈತ್ರಿಕೂಟ ರಚಿಸುವ ಜವಾಬ್ದಾರಿಯನ್ನು ಅದಾನಿ ಅವರಿಗೆ ನೀಡಲಾಗಿತ್ತೇ? 3. ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಉದ್ಯಮಿಯೊಬ್ಬರು ಏಕೆ ಇಷ್ಟೊಂದು ಆಸಕ್ತಿವಹಿಸಿ ಕೆಲಸ ಮಾಡಿದರು?
ಸಭೆಯಲ್ಲಿ ಉದ್ಯಮಿ ಗೌತಮ್ ಅದಾನಿ ಅವರೂ ಇದ್ದರು ಎಂದು ಹೇಳುವ ಮೂಲಕ ಅಜಿತ್ ಅವರು ಮಹತ್ವದ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ. ಸಭೆಯಲ್ಲಿ ಹಾಜರಿದ್ದ ಅದಾನಿ ಅವರಿಗೆ ಫಡಣವೀಸ್–ಶಿಂದೆ ಸರ್ಕಾರವು ಕೋಟಿಗಟ್ಟಲೆ ಬೆಲೆ ಬಾಳುವ ಭೂಮಿಯನ್ನು ತೀರಾ ಕಡಿಮೆ ಬೆಲೆಗೆ ಮಾರಿದೆ.
–ಸುಪ್ರಿಯಾ ಶ್ರೀನೇತ್, ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್ ವೇದಿಕೆ ಮುಖ್ಯಸ್ಥೆ
ಮೋದಿ ಮತ್ತು ಅದಾನಿ ನಡುವಿನ ಸಂಬಂಧಕ್ಕೆ ಇದಕ್ಕಿಂತಲೂ ಉತ್ತಮವಾದ ಆಘಾತಕಾರಿಯಾದ ವಿಚಾರವಿರಲು ಸಾಧ್ಯವಿಲ್ಲ. ಲಜ್ಜೆಗೆಟ್ಟ ಸಂಬಂಧವನ್ನು ತೆರೆದಿಡುವ ಹೊಸ ಉದಾಹರಣೆಯೊಂದು ಬಹಿರಂಗಗೊಂಡಿದೆ. ಪಕ್ಷಗಳ ಸಭೆಯೊಂದರಲ್ಲಿ ಅಧಿಕೃತವಾಗಿ ಉದ್ಯಮಿಯೊಬ್ಬರು ಹೇಗೆ ಪಾಲ್ಗೊಳ್ಳುತ್ತಾರೆ?
–ಪವನ್ ಖೇರಾ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ