ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಪರ ಈ ವಾರ 9 ಪ್ರಚಾರ ರ್ಯಾಲಿ ನಡೆಸಲಿದ್ದಾರೆ. ಮೊದಲ ಸಮಾವೇಶವು ಇಂದು ಧುಲೆಯಲ್ಲಿ ಆರಂಭವಾಗಲಿದೆ ಎಂದು ಪಕ್ಷ ಹೇಳಿದೆ.

ಈ ಸಂಬಂಧ ಬಿಜೆಪಿ ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಮೋದಿ ಅವರು ನವೆಂಬರ್ 12ರಂದು ಪುಣೆಯಲ್ಲಿ ರೋಡ್ ಶೋ ನಡೆಸಲಿದ್ದಾರೆ ಎಂದೂ ತಿಳಿಸಿದೆ.

ಮೋದಿ ಅವರ ಮೊದಲ ರ್ಯಾಲಿಯು ಇಂದು ಮಧ್ಯಾಹ್ನ 12ಕ್ಕೆ ಧುಲೆಯಲ್ಲಿ ಆರಂಭವಾಗಲಿದೆ. ಮಧ್ಯಾಹ್ನ 2ಕ್ಕೆ ನಾಸಿಕ್ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಳೆ (ನವೆಂಬರ್ 9) ಮಧ್ಯಾಹ್ನ 12ಕ್ಕೆ ಅಕೋಲದಲ್ಲಿ ಮತ್ತು ಮಧ್ಯಾಹ್ನ 2ಕ್ಕೆ ನಾಂದೇಡ್ನಲ್ಲಿ ಪ್ರಚಾರ ನಡೆಸಲಿದ್ದಾರೆ.

ನವೆಂಬರ್ 12ರಂದು ಚಿಮುರ್ (ಚಂದ್ರಪುರ ಜಿಲ್ಲೆ) ಹಾಗೂ ಸೋಲಾಪುರದಲ್ಲಿ ರ್ಯಾಲಿ ನಡೆಸಲಿರುವ ಪ್ರಧಾನಿ, ಅದೇ ದಿನ ಪುಣೆಯಲ್ಲಿ ಸಂಜೆ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಳಿಕ, ಛತ್ರಪತಿ ಸಂಭಾಜಿನಗರ, ರಾಯಗಢ ಮತ್ತು ಮುಂಬೈನಲ್ಲಿ ನವೆಂಬರ್ 14ರಂದು ಬಿಜೆಪಿ ಪರ ಮತಯಾಚಿಸಲಿದ್ದಾರೆ.
.ಮಹಾರಾಷ್ಟ್ರ ಚುನಾವಣೆ | ಅಧಿಕಾರಕ್ಕೇರಿದರೆ ಮಹಿಳೆಯರಿಗೆ ಮಾಸಿಕ ₹ 3,000: ಎಂವಿಎ.ಮಹಾ ಚುನಾವಣೆ: ಎಂವಿಎ ಮೈತ್ರಿಕೂಟವನ್ನು 'ಮಹಾ ವಸೂಲಿ ಆಘಾಡಿ' ಎಂದ ಸಿಎಂ ಶಿಂದೆ.
288 ಸದಸ್ಯ ಬಲದ 'ಮಹಾ' ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. ಮೂರು ದಿನಗಳ ಬಳಿಕ (ನವೆಂಬರ್ 23ರಂದು) ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿಯು ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಮತ್ತು ಅಜಿತ್ ಪವಾರ್ ಅವರ ಎನ್ಸಿಪಿಯೊಂದಿಗೆ ಆಡಳಿತಾರೂಢ 'ಮಹಾಯುತಿ' ಮೈತ್ರಿಕೂಟದಲ್ಲಿದೆ.

ಕಾಂಗ್ರೆಸ್, ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ, ಶರದ್ ಪವಾರ್ ಅವರ ಎನ್ಸಿಪಿ ಇರುವ 'ಮಹಾ ವಿಕಾಸ ಆಘಾಡಿ' ಕೂಟವು ಮಹಾಯುತಿಗೆ ಸವಾಲೊಡ್ಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.