ನವದೆಹಲಿ: ಚುನಾವಣೆ ಘೋಷಣೆಯಾದ ಬಳಿಕ ಮಹಾರಾಷ್ಟ್ರದ ಮಹಾಯುತಿ ಸರ್ಕಾರವು ಅದಾನಿ ಸಮೂಹದ ಯೋಜನೆಗಳಿಗೆ ತರಾತುರಿಯಲ್ಲಿ ಅನುಮೋದನೆ ನೀಡಿತ್ತು ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. ಈ ನಾಟಕಗಳನ್ನು ಜನರು ನೋಡಿದ್ದಾರೆ ಎಂದೂ ಹೇಳಿದೆ.
.ಮಹಾರಾಷ್ಟ್ರ ಚುನಾವಣೆ ಕೋಟ್ಯಧಿಪತಿಗಳು–ಬಡವರ ನಡುವಿನ ಯುದ್ಧವಾಗಿದೆ: ರಾಹುಲ್ ಗಾಂಧಿ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಅಕ್ಟೋಬರ್ 15 ರಂದು ಚುನಾವಣಾ ಆಯೋಗ ವಿಧಾನಸಭಾ ಚುನಾವಣೆಯನ್ನು ಘೋಷಿಸಿದ ಬಳಿಕ, ರಾಜ್ಯ ಸರ್ಕಾರವು ‘ಮೋದಾನಿ’ಗಾಗಿ ಯೋಜನೆಗಳನ್ನು ಅನುಮೋದಿಸುವ ಕಾರ್ಯದಲ್ಲಿ ತೊಡಗಿತ್ತು’ ಎಂದು ಆರೋಪಿಸಿದ್ದಾರೆ.

‘ಮಹಾಯುತಿ ಸರ್ಕಾರವು ತನ್ನ ಅಧಿಕಾರದ ಕೊನೆಯ ಅವಧಿಯಲ್ಲಿ ಹೇಗೆ ನಡೆದಿದೆ ಎಂದು ನೋಡೋಣ, ಸೆಪ್ಟೆಂಬರ್ 15, 2024: ಹೆಚ್ಚಿನ ಬೆಲೆಯಲ್ಲಿ ಮಹಾರಾಷ್ಟ್ರಕ್ಕೆ 6,600 ಮೆಗಾವ್ಯಾಟ್ ವಿದ್ಯುತ್ ಪೂರೈಸಲು ಮೊದಾನಿ ಇಂಧನ ಗುತ್ತಿಗೆಯನ್ನು ಗೆದ್ದರು; ಸೆಪ್ಟೆಂಬರ್ 30, 2024: 255 ಎಕರೆ ಪರಿಸರ ಸೂಕ್ಷ್ಮ ಭೂಮಿಯನ್ನು ಮೊದಾನಿಗೆ ಹಸ್ತಾಂತರಿಸಲಾಯಿತು’ ಎಂದು ಅವರು ಬರೆದುಕೊಂಡಿದ್ದಾರೆ.
.ಮಹಾರಾಷ್ಟ್ರ: ಚುನಾವಣಾ ರ್ಯಾಲಿ ರದ್ದುಗೊಳಿಸಿ ದೆಹಲಿಗೆ ತೆರಳಿದ ಅಮಿತ್ ಶಾ.
‘ಅಕ್ಟೋಬರ್ 10, 2024: ಮಧ್ನಲ್ಲಿ 140 ಎಕರೆ ಭೂಮಿಯನ್ನು ಮೊದಾನಿಗೆ ಹಸ್ತಾಂತರಿಸಲಾಯಿತು; ಅಕ್ಟೋಬರ್ 14, 2024: ಮುಂಬೈನ ಡಿಯೋನಾರ್ ಲ್ಯಾಂಡ್ಫಿಲ್ನಿಂದ 124 ಎಕರೆಗಳನ್ನು ಮೊದಾನಿಗೆ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಆದರೆ ಮಹಾರಾಷ್ಟ್ರದ ಜನರು ಈಗಾಗಲೇ ಈ ಆಟಗಳನ್ನು ನೋಡಿದ್ದಾರೆ. ಅವರು ಖಂಡಿತವಾಗಿಯೂ ಮಹಾ ವಿಕಾಸ ಅಘಾಡಿಗೆ ಸ್ಪಷ್ಟ ಮತ್ತು ನಿರ್ಣಾಯಕ ಬಹುಮತ ನೀಡುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವೆಂಬರ್ 20 ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ.
.Maharashtra Elections 2024: ಮಹಾರಾಷ್ಟ್ರ ಚುನಾವಣೆಯಲ್ಲಿ ‘ಗದ್ದರ್’ ಗದ್ದಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.