ಕೋಲ್ಕತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಾಖಲೆಯ ಗೆಲುವಿನೊಂದಿಗೆ ರಾಜ್ಯದ ಸಿಎಂ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭವಾನಿಪುರ ಉಪಚುನಾವಣೆಯಲ್ಲಿ 58,832 ಮತಗಳ ದಾಖಲೆಯ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋವಾನ್‌ದೇವ್ ಚಟ್ಟೋಪಾಧ್ಯಾಯ ಅವರು ಸುಮಾರು 28,000 ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ಇದೀಗ ಮಮತಾ ಅವರು ಉಪಚುನಾವಣೆಯಲ್ಲಿ ಸುಮಾರು 30 ಸಾವಿರದಷ್ಟು ಅಧಿಕ ಮತಗಳನ್ನು ಸೆಳೆದು ತರುವ ಮೂಲಕ ದಾಖಲೆಯ ಜಯ ಸಾಧಿಸಿದ್ದಾರೆ.

ಪ್ರಚಾರದ ಆರಂಭದಲ್ಲಿಯೇ ಮಮತಾ ಅವರು ನಂದಿಗ್ರಾಮದಲ್ಲಿ ಗಾಯಗೊಂಡರು. ಕಾಲಿನ ಗಾಯಕ್ಕೆ ಪ್ಲಾಸ್ಟರ್ ಹಾಕಿಸಿಕೊಂಡು ಗಾಲಿಕುರ್ಚಿಯಲ್ಲಿಯೇ ಪ್ರಚಾರ ನಡೆಸಿದ್ದರು. 294 ಕ್ಷೇತ್ರಗಳ ಪೈಕಿ 213ರಲ್ಲಿ ಗೆಲುವು ದಾಖಲಿಸಿದ ಟಿಎಂಸಿಗೆ ಗೆಲುವಿನ ಸಂಭ್ರಮಾಚರಣೆಯನ್ನು ಮಮತಾ ಬ್ಯಾನರ್ಜಿ ಸೋಲು ದೂರ ಮಾಡಿತ್ತು. ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿಯ ಸವಾಲನ್ನು ಸ್ವೀಕರಿಸಿ ಸ್ವಕ್ಷೇತ್ರ ಬಿಟ್ಟು ನಂದಿಗ್ರಾಮದಲ್ಲಿ ಸ್ಪರ್ಧಿಸಿದ್ದ ಮಮತಾ ಅಲ್ಪಮತಗಳ ಅಂತರದಿಂದ ಸೋತರು. ಇದರಿಂದ ಮುಖ್ಯಮಂತ್ರಿಯಾಗಿ ಮುಂದುವರಿಯಲು 6 ತಿಂಗಳೊಳಗೆ ಶಾಸಕರಾಗಿ ಆಯ್ಕೆಯಾಗಬೇಕಿತ್ತು.

ಭವಾನಿಪುರ ಉಪಚುನಾವಣೆ: ಮಮತಾ ಬ್ಯಾನರ್ಜಿಗೆ 58 ಸಾವಿರ ಮತಗಳ ಅಂತರದ ಜಯ

ಈ ಸಂದರ್ಭ ಮಮತಾ ಬ್ಯಾನರ್ಜಿ ಅವರು ಸಾಕಷ್ಟು ಟೀಕೆಗೂ ಒಳಗಾಗಿದ್ದರು. ಮುಖ್ಯಮಂತ್ರಿ ಅಭ್ಯರ್ಥಿಯೇ ಸೋಲು ಕಂಡಿದ್ದು ರೋಚಕ ಗೆಲುವಿನ ನಗೆಯನ್ನು ಮರೆ ಮಾಡಿತ್ತು.

ಈ ಸೆಣೆಸಾಟದಮುಂದುವರಿದ ಭಾಗ ಎಂಬಂತೆ ಪುನಃ ಭವಾನಿಪುರ ಕ್ಷೇತ್ರದಲ್ಲಿ ಮಾರ್ಪಟ್ಟಿದ್ದು ಪಶ್ಚಿಮ ಬಂಗಾಳ ರಾಜಕೀಯ ಇತಿಹಾಸದ ತಿರುವು.

ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಭವಾನಿಪುರದ ಶಾಸಕರಾಗಿ ಆಯ್ಕೆಯಾಗಿದ್ದ ಸೋವಾನ್‌ದೇವ್ ಚಟ್ಟೋಪಾಧ್ಯಾಯ ಅವರು ರಾಜೀನಾಮೆ ನೀಡುವ ಮೂಲಕ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಮಮತಾ ಅವರಿಗೆ ದಾರಿ ಮಾಡಿಕೊಟ್ಟಿದ್ದರು.

2024ರಲ್ಲಿ ದಿಲ್ಲಿಯಲ್ಲಿ ಸರ್ಕಾರ ರಚಿಸುತ್ತೇವೆ: ಮಮತಾ ಸಹೋದರ ಕಾರ್ತಿಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.