ನವದೆಹಲಿ: ನಕಲಿ ಎಂಟ್ರಿ ಪಾಸ್ ಬಳಸಿ ಸಂಸತ್‌ಗೆ ಪ್ರವೇಶಿಸಲು ಯತ್ನಿಸಿದ ಆರೋಪದಡಿಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಸಂಸತ್ ಸಂಕೀರ್ಣದಲ್ಲಿ ಕಟ್ಟಡ ಕಾಮಗಾರಿ ಮಾಡುತ್ತಿದ್ದ ಕಾರ್ಮಿಕರೊಬ್ಬರು ನಕಲಿ ಪಾಸ್ ತೋರಿಸಿ ಗೇಟ್ ಒಂದರಲ್ಲಿ ಪ್ರವೇಶಿಸಲು ಯತ್ನಿಸಿದ್ದರು ಎಂದು ಹೇಳಿದ್ದಾರೆ.

ಬಳಿಕ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಗಳು, ಆತನನ್ನು ಬಂಧಿಸಿ ದೆಹಲಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಆತನನ್ನು ವಿಚಾರಣೆಗೆ ಒಳಸಪಡಿಸಲಾಯಿತು. ಈ ವೇಳೆ ಆತನ ಪಾಸ್ ಅವಧಿ ಮುಕ್ತಾಯವಾಗಿರುವ ವಿಚಾರ ತಿಳಿದು ಬಂದಿದೆ.

ಆಗಸ್ಟ್ 16ರಂದು ಇದಕ್ಕೆ ಸಮಾನವಾದ ನಡೆದ ಮತ್ತೊಂದು ಘಟನೆಯಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಿ ಸಿಐಎಸ್‌ಎಫ್ ಪೊಲೀಸರಿಗೆ ಒಪ್ಪಿಸಿತ್ತು.
.Bangladesh Unrest | ಬಾಂಗ್ಲಾದೇಶ ಸಂಸತ್ ವಿಸರ್ಜನೆ.ಸೋರುತ್ತಿದೆ ನೂತನ ಸಂಸತ್ ಭವನ: ವಿಡಿಯೊ ಹಂಚಿಕೊಂಡ ಕಾಂಗ್ರೆಸ್ ಸಂಸದ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.