ಅಹಮದಾಬಾದ್: ರಾಜಸ್ಥಾನದ ಶಾಸಕ ರವೀಂದ್ರ ಸಿಂಗ್ ಭಾಟಿ ಅವರಿಗೆ ಸಾಮಾಜಿಕ ಮಾಧ್ಯಮವೊಂದರಲ್ಲಿ ಕೊಲೆ ಬೆದರಿಕೆಯ ಪೋಸ್ಟ್ ಮಾಡಿದ್ದ ಆರೋಪದಡಿ ವ್ಯಕ್ತಿಯೊಬ್ಬನನ್ನು ಅಹಮದಾಬಾದ್ನ ಅಪರಾಧ ವಿಭಾಗದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆರೋಪಿಯನ್ನು ರಾಜಸ್ಥಾನದ ಬಲೋತ್ರಾ ಜಿಲ್ಲೆಯ ನಿವಾಸಿ ಕಿಶನ್ಲಾಲ್ ಜಾಟ್ ಎಂದು ಗುರುತಿಸಲಾಗಿದ್ದು, ಗುಜರಾತಿನ ಅಹಮದಾಬಾದ್ ರೈಲ್ವೆ ನಿಲ್ದಾಣದ ಬಳಿ ಕಿಶನ್ಲಾಲ್ನನ್ನು ಬಂಧಿಸಲಾಗಿದೆ.
.ವಿಮಾನಕ್ಕೆ ಹುಸಿ ಬಾಂಬ್ ಬೆದರಿಕೆ: ತಮಾಷೆಗಾಗಿ ಇ– ಮೇಲ್ ಕಳುಹಿಸಿದ್ದೆ ಎಂದ ಬಾಲಕ.ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಉತ್ತರಾಧಿಕಾರಿ ಆಗಿ ಆಕಾಶ್ ಆನಂದ್ ಹೆಸರು ಘೋಷಣೆ.
ಇತ್ತೀಚೆಗೆ ಆರೋಪಿ, ಶಾಸಕ ಭಾಟಿ ಅವರನ್ನು ಕೊಲ್ಲುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ಪೋಸ್ಟ್ ಮಾಡುವ ಮೂಲಕ ಬೆದರಿಕೆ ಹಾಕಿದ್ದನು. ಈ ನಡುವೆ ಮಧ್ಯಪ್ರದೇಶದಿಂದ ಬಂದೂಕು ಹಾಗೂ 10 ಗುಂಡುಗಳನ್ನು ಖರೀದಿಸಿದ್ದನು. ಒಂದು ಸುತ್ತಿನ ಗುಂಡು ಹಾರಿಸುವ ಮೂಲಕ ಬಂದೂಕನ್ನು ಪರೀಕ್ಷಿಸಿದ್ದನು ಎಂಬುವುದನ್ನು ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
.ಬಿಹಾರದಲ್ಲಿ ಸೇತುವೆ ಕುಸಿತ: ವಾರದಲ್ಲಿ ಇದು ಮೂರನೇ ಘಟನೆ.ಕೇರಳದ 3 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ 'ರೆಡ್ ಅಲರ್ಟ್'.
ಆರೋಪಿಯನ್ನು ರಾಜಸ್ಥಾನದ ಪೊಲೀಸರಿಗೆ ಹಸ್ತಾಂತರಿಸಲಾಗವುದು ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ ಬಂದೂಕು ಹಾಗೂ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.