ಮಲಪ್ಪುರ: ನಗರದ ಖಾಸಗಿ ಆಸ್ಪತ್ರೆಯಲ್ಲಿ ಈಚೆಗೆ ನಿಧನರಾದ 24 ವರ್ಷದ ವ್ಯಕ್ತಿಗೆ ನಿಫಾ ವೈರಸ್ ಸೋಂಕು ತಗುಲಿದೆ ಎಂದು ಕೇರಳದ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಭಾನುವಾರ ತಿಳಿಸಿದ್ದಾರೆ.

‘ಬೆಂಗಳೂರಿನಿಂದ ರಾಜ್ಯಕ್ಕೆ ಬಂದಿದ್ದ ಮಲಪ್ಪುರ ಮೂಲದ ವ್ಯಕ್ತಿಯು ಸೆ. 9ರಂದು ನಿಧನರಾಗಿದ್ದರು. ಪ್ರಾದೇಶಿಕ ವೈದ್ಯಕೀಯ ಅಧಿಕಾರಿಯು ಈ ಸಾವಿನ ತನಿಖೆ ನಡೆಸಿದ ನಂತರ ಅನುಮಾನ ಸೃಷ್ಟಿಯಾಗಿತ್ತು. ತಕ್ಷಣವೇ ಲಭ್ಯವಿದ್ದ ಮಾದರಿಗಳನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ನಿಫಾ ವೈರಸ್ ತಗುಲಿದ್ದು ದೃಢಪಟ್ಟಿದೆ’ ಎಂದು ಹೇಳಿದ್ದಾರೆ.

ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯು (ಎನ್‌ಐವಿ) ಭಾನುವಾರ ಸೋಂಕನ್ನು ದೃಢಪಡಿಸಿದೆ.

ಆರೋಗ್ಯ ಸಚಿವರ ನೇತೃತ್ವದಲ್ಲಿ ಶನಿವಾರ ರಾತ್ರಿಯೇ ನಡೆದ ಉನ್ನತ ಮಟ್ಟದ ಸಭೆಯಲ್ಲಿ 16 ಸಮಿತಿ ರಚಿಸಿದ್ದು, 151 ಜನರ ಸಂಪರ್ಕ ಪಟ್ಟಿ ಸಿದ್ಧಪಡಿಸಲಾಗಿದೆ.

ಐಸೋಲೇಷನ್‌ನಲ್ಲಿದ್ದ ಐವರಲ್ಲಿ ಜ್ವರ ಹಾಗೂ ಸೋಂಕಿನ ಲಕ್ಷಣಗಳು ಗೋಚರಿಸಿದ್ದು, ಇವರ ಮಾದರಿಗಳನ್ನು ಪರೀಕ್ಷೆಗಾಗಿ ಕಳಿಸಲಾಗಿದೆ ಎಂದು ವೀಣಾ ತಿಳಿಸಿದ್ದಾರೆ.

ಸೋಂಕಿನಿಂದ ಬಳಲುತ್ತಿದ್ದ ಬಾಲಕನೊಬ್ಬ ಜುಲೈ 21ರಂದು ಮೃತಪಟ್ಟಿದ್ದ. ರಾಜ್ಯದಲ್ಲಿ ಈ ವರ್ಷ ನಿಫಾ ವೈರಸ್‌ನಿಂದ ಮೃತಪಟ್ಟ ಪ್ರಕರಣ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.