ಚುರಾಚಾಂದ್ಪುರ: ಮಣಿಪುರದ ಜಿರೀಬಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟವರಿಗೆ ನ್ಯಾಯ ಒದಗಿಸುವಂತೆ ಚುರಾಚಾಂದ್ಪುರ ಜಿಲ್ಲೆಯಲ್ಲಿ ನೂರಾರು ಜನ ಖಾಲಿ ಶವಪೆಟ್ಟಿಗೆ ಹೊತ್ತು ಮೆರವಣಿಗೆ ನಡೆಸಿದ್ದಾರೆ.

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮೆರವಣಿಗೆ ಆರಂಭಿಸಿದ್ದಾರೆ. ಮೃತರಿಗೆ ನ್ಯಾಯ ಒದಗಿಸಬೇಕು, ಜಿರೀಬಾಮ್ನ ಗುಡ್ಡಗಾಡು ಪ್ರದೇಶಕ್ಕೆ ಪ್ರತ್ಯೇಕ ಆಡಳಿತ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಿಂದ ಹಿಂಸಾಚಾರದಲ್ಲಿ ಮೃತಪಟ್ಟ ಕುಕಿ ಸಮುದಾಯದವರನ್ನು ಸಮಾಧಿ ಮಾಡಿದ ‘ನೆನಪಿನ ಗೋಡೆ’ಯ ಬಳಿ ಮೆರವಣಿಗೆ ಅಂತ್ಯಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವಾರ ಜಿರೀಬಾಮ್ ಜಿಲ್ಲೆಯಲ್ಲಿ ಭದ್ರತಾಪಡೆಗಳು 10 ಮಂದಿ ಶಂಕಿತ ಉಗ್ರರನ್ನು ಹತ್ಯೆ ಮಾಡಿದ್ದರು.

ಮೃತರಾದವರು ಜಿರೀಬಾಮ್ ಗ್ರಾಮದ ಸ್ವಯಂ ಸೇವಕರು ಎಂದು ಕುಕಿ–ಜೋ ಸಮುದಾಯದ ಹೇಳಿದೆ. ಆದರೆ ಪೊಲೀಸರು ಹತ್ಯೆಯ ಬಳಿಕ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.
.ಮಣಿಪುರ |ತೀವ್ರ ಹಿಂಸೆ, 5 ಜಿಲ್ಲೆ ಪ್ರಕ್ಷುಬ್ಧ: 4 ಶಾಸಕರ ಮನೆಗಳಿಗೆ ಬೆಂಕಿ .ಆಳ–ಅಗಲ | ಮಣಿಪುರ: ತಿದಿ ಒತ್ತಿದ ಹಿಂಸೆಯ ಕುಲುಮೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.