ನವದೆಹಲಿ: ಪ್ರಸಕ್ತ ಸಾಲಿನ ನೈರುತ್ಯ ಮುಂಗಾರಿನ ನಿರ್ಗಮನ ಭಾರತದಿಂದ 8 ದಿನ ತಡವಾಗಿ ಇಂದಿನಿಂದ ಆರಂಭವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜಸ್ಥಾನದ ನೈರುತ್ಯ ಭಾಗದಲ್ಲಿ ಇಂದು (ಸೆ.25) ನೈರುತ್ಯ ಮುಂಗಾರು ಅಂತ್ಯಗೊಂಡಿದೆ. ಸಾಮಾನ್ಯವಾಗಿ ರಾಜಸ್ಥಾನದಲ್ಲಿ ಸೆ.17 ರಂದು ಮುಂಗಾರು ಅಂತ್ಯವಾಗುತ್ತಿತ್ತು. ಈ ಬಾರಿ 8 ದಿನ ತಡವಾಗಿದೆ.

ಈ ವರ್ಷ ಸತತ 13ನೇ ಬಾರಿ ಮಾನ್ಸೂನ್ ನಿರ್ಗಮನದ ಆರಂಭ ವಿಳಂಬವಾಗಿದೆ.

ಮಾನ್ಸೂನ್‌ನ ನಿರ್ಗಮನದ ವಿಳಂಬವು ದೀರ್ಘವಾದ ಮಳೆಗಾಲ ಎಂದು ಸೂಚಿಸುತ್ತದೆ. ಇದು ಕೃಷಿ ಉತ್ಪಾದನೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ, ವಿಶೇಷವಾಗಿ ವಾಯವ್ಯ ಭಾರತಕ್ಕೆ ಮುಂಗಾರು ಮಳೆಯು ರಬಿ ಬೆಳೆ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಇಲಾಖೆ ಹೇಳಿದೆ

ಸಾಮಾನ್ಯವಾಗಿ ನೈರುತ್ಯ ಮುಂಗಾರು ಪ್ರತೀ ವರ್ಷ ಜೂನ್1 ರಂದು ಕೇರಳಕ್ಕೆ ಆಗಮಿಸಿ, ಜುಲೈ 8ಕ್ಕೆ ದೇಶದಾದ್ಯಂತ ಆವರಿಸುತ್ತದೆ, ಸೆಪ್ಟೆಂಬರ್ 17 ರಿಂದ ನಿರ್ಗಮನ ಆರಂಭವಾಗಿ ಅಕ್ಟೋಬರ್ 15ರ ಹೊತ್ತಿಗೆ ಅಂತ್ಯಗೊಳ್ಳುತ್ತದೆ.

ಐಎಂಡಿ ಪ್ರಕಾರ, ಸೆಪ್ಟೆಂಬರ್ 1 ರ ನಂತರ ಮೂರು ಪ್ರಮುಖ ಸಿನೊಪ್ಟಿಕ್(synoptic )ವೈಶಿಷ್ಟ್ಯಗಳ ಆಧಾರದ ಮೇಲೆ ದೇಶದ ವಾಯವ್ಯ ಭಾಗಗಳಿಂದ ಮಾನ್ಸೂನ್ ನಿರ್ಗಮನವನ್ನು ನಿರ್ಧರಿಸಲಾಗುತ್ತದೆ,

– ಐದು ದಿನಗಳ ಕಾಲ ಈ ಪ್ರದೇಶದಲ್ಲಿ ಮಳೆಯಾಗದಿದ್ದರೆ

– ಕೆಳ ಟ್ರೋಪೋಸ್ಪಿಯರ್‌ನಲ್ಲಿ (lower troposphere) (850 hPa ಮತ್ತು ಕೆಳಗೆ) ಆಂಟಿಸೈಕ್ಲೋನ್ ಉಂಟಾದರೆ

–ಉಪಗ್ರಹದ ನೀರಿನ ಆವಿ ಚಿತ್ರಗಳು ಮತ್ತು ಟೆಫಿಗ್ರಾಮ್‌ಗಳ ಮಾಹಿತಿಯಂತೆ ತೇವಾಂಶದಲ್ಲಿ ಗಣನೀಯ ಇಳಿಕೆಯಾದರೆ ಮಾನ್ಸೂನ್ ನಿರ್ಗಮನವಾಗುತ್ತಿದೆ ಎಂದು ಪರಿಗಣಿಸಲಾಗುತ್ತದೆ.

ಈ ಬಾರಿಯ ಮಾನ್ಸೂನ್‌ನಲ್ಲಿ ಭಾರತದಲ್ಲಿ 796.4 ಮಿಲಿ ಮೀಟರ್ ಮಳೆಯಾಗಿದೆ. 843.2 ಮಿಲಿ ಮೀಟರ್ ಮಳೆಯಾದರೆ ಅದನ್ನು ಸಾಮಾನ್ಯ ಮಳೆಗಾಲ ಎನ್ನಲಾಗುತ್ತದೆ. ಅದರೆ ಇದಕ್ಕೆ ಹೋಲಿಸಿದರೆ ಈ ಬಾರಿ 6 ಪ್ರತಿಶತದಷ್ಟು ಕಡಿಮೆ ಮಳೆಯಾಗಿದೆ.

ಭಾರತದಲ್ಲಿ ವಾರ್ಷಿಕವಾಗಿ ಸರಾಸರಿ 870 ಮಿಲಿ ಮೀಟರ್ ಮಳೆಯಾಗುತ್ತದೆ. ದೀರ್ಘಾವಧಿಯಲ್ಲಿ ಸರಾಸರಿ (LPA) 94 ಪ್ರತಿಶತ ಮತ್ತು 106 ಪ್ರತಿಶತ ನಡುವಿನ ಮಳೆಯನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.