ಬೆಂಗಳೂರು: ಭಾರತದ ಹೆಚ್ಚಿನ ಮುಸ್ಲಿಂ ನಾಯಕರು ಅಫ್ಗಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ಅನ್ನು ಬೆಂಬಲಿಸುತ್ತಿದ್ದಾರೆ ಎಂದು ಬಾಂಗ್ಲಾ ಮೂಲದ ಲೇಖಕಿ ತಸ್ಲಿಮಾ ನಸ್ರೀನ್ ಗಂಭೀರ ಆರೋಪ ಮಾಡಿದ್ದಾರೆ.

'ಆಫ್ಗನ್ನಲ್ಲಿ ತಾಲಿಬಾನ್ ಅನ್ನು ಬೆಂಬಲಿಸುವವರು ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆಯನ್ನು ಯಾಕೆ ಬಯಸುತ್ತಾರೆ ಎಂಬದು ಅಚ್ಚರಿಯಾಗಿದೆ. ಅದೇ ನಾಯಕರು ಮುಸ್ಲಿಂ ರಾಷ್ಟ್ರಗಳಲ್ಲಿ ಥಿಯೋಕ್ರೆಟಿಕ್ (ಧರ್ಮ ಮತ್ತು ದೇವರ ಹೆಸರಲ್ಲಿ ನಿಯಮಗಳ ಹೇರಿಕೆ ) ಮತ್ತು ಜಾತ್ಯಾತೀತವಲ್ಲದ ಆಡಳಿತವನ್ನು ಬೆಂಬಲಿಸುತ್ತಾರೆ' ಎಂದು ತಸ್ಲಿಮಾ ನಸ್ರೀನ್ ಕಿಡಿಕಾರಿದ್ದಾರೆ.

'ಭಾರತದಲ್ಲಿ ದೇವಬಂದಿಗಳು ಉಗ್ರಕೃತ್ಯದಲ್ಲಿ ಭಾಗಿಯಾಗಿಲ್ಲ. ಆದರೆ ಭಾರತದ ಹೊರಗಿನ ಕೆಲವು ಉಗ್ರ ಸಂಘಟನೆಗಳು ದೇವಬಂದಿ ಸಿದ್ಧಾಂತದಿಂದ ಆಕರ್ಷಿತಗೊಂಡಿವೆ' ಎಂದು ತಸ್ಲಿಮಾ ಟ್ವೀಟ್ನಲ್ಲಿ ಹೇಳಿದ್ದಾರೆ.

ದೇವಬಂದಿ ಎಂಬುದು ಸುನ್ನಿ ಪಂಥದೊಳಗೆ ಆರಂಭಗೊಂಡ ಇಸ್ಲಾಂ ಪುನಶ್ಚೇತನ ಆಂದೋಲನವಾಗಿದೆ. ಇದು 19ನೇ ಶತಮಾನದಲ್ಲಿ ದಾರುಲ್ ಉಲೂಮ್ ಇಸ್ಲಾಮಿಕ್ ಸೆಮಿನರಿ ಆಧಾರದಲ್ಲಿ ಉತ್ತರ ಪ್ರದೇಶದ ಶಹಾರನ್ಪುರದ ದೇವಬಂದ ಎಂಬಲ್ಲಿ ಆರಂಭಗೊಂಡ ಆಂದೋಲನವಾಗಿದೆ.

ನಿಜವಾದ ಇಸ್ಲಾಂ ಯಾವ ರಾಷ್ಟ್ರದಲ್ಲಿ ಆಚರಿಸಲಾಗುತ್ತಿದೆ ಹೇಳಿ: ತಸ್ಲಿಮಾ ನಸ್ರೀನ್

'ಸ್ತ್ರೀದ್ವೇಷಿ ತಾಲಿಬಾನಿಯರನ್ನು ಶ್ಲಾಘಿಸುವ ಮೊದಲು ಆಫ್ಗನ್ ಮಹಿಳೆಯರ ಸ್ಥಾನದಲ್ಲಿ ನಿಮ್ಮನ್ನು ಊಹಿಸಿಕೊಳ್ಳಿ' ಎಂದು ತಸ್ಲಿಮಾ ನಸ್ರೀನ್ ಮತ್ತೊಂದು ಟ್ವೀಟ್ನಲ್ಲಿ ಮಾರ್ಮಿಕವಾಗಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.