ಬೆಂಗಳೂರು: ದೇಶದಾದ್ಯಂತ ಸುದ್ದಿಯಾಗಿರುವ ಮೀಟೂ ಅಭಿಯಾನ ಮಾಧ್ಯಮ ಸಂಸ್ಥೆಗಳಲ್ಲಿಯೂ ಸದ್ದು ಮಾಡುತ್ತಿದೆ. ಲೈಂಗಿಕ ಕಿರುಕುಳದ ಆರೋಪಕ್ಕೆ ಗುರಿಯಾಗಿದ್ದಟೈಮ್ಸ್ ಆಫ್ ಇಂಡಿಯಾದ ಹೈದರಾಬಾದ್ನ ಸ್ಥಾನಿಕ ಸಂಪಾದಕ ಕೆ.ಆರ್. ಶ್ರೀನಿವಾಸ್ ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

’ಮೀಟೂ’ ಕಾರಣದಿಂದಾಗಿ ಸಂಪಾದಕ ಸ್ಥಾನದಲ್ಲಿರುವ ಹಿರಿಯ ಪತ್ರಕರ್ತರೊಬ್ಬರು ರಾಜೀನಾಮೆ ನೀಡಿರುವ ಮೊದಲ ಪ್ರಕರಣ ಇದಾಗಿದೆ.ಅಶ್ಲೀಲ ಸಂದೇಶಗಳು, ಸಂಜ್ಞೆಗಳನ್ನು ಕಳುಹಿಸುವುದಲ್ಲದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಶ್ರೀನಿವಾಸ್ವಿರುದ್ಧ ಏಳು ಮಹಿಳೆಯರು ದೂರಿನಲ್ಲಿ ಆರೋಪಿಸಿದ್ದರು.

ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಂಸ್ಥೆಯೇ ಶ್ರೀನಿವಾಸ್ ಅವರಿಗೆ ಸೂಚಿಸಿದೆಯೋ ಅಥವಾ ಇದು ಅವರ ಸ್ವಂತ ನಿರ್ಧಾರವೋ ತಿಳಿದು ಬಂದಿಲ್ಲ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಆದರೆ, ’ನನ್ನನ್ನು ಟಾರ್ಗೆಟ್ ಮಾಡಲಾಗಿದೆ’ ಎಂದು ರಾಜೀನಾಮೆ ಪತ್ರದಲ್ಲಿ ಬರೆದಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ:ಪ್ರತಿರೋಧದ ದನಿ ಮೌನವಲ್ಲ!

ಅಕ್ಟೋಬರ್ 9ರಂದು ಮಹಿಳೆಯರು ದೂರು ನೀಡಿದ ಬೆನ್ನಲೇ ಆರೋಪಗಳ ಮೇಲಿನ ತನಿಖೆ ಪೂರ್ಣಗೊಳ್ಳುವವರೆಗೂ ಆಡಳಿತಾತ್ಮಕ ರಜೆ ಮೇಲೆ ತೆರಳುವಂತೆ ಶ್ರೀನಿವಾಸ್ ಅವರಿಗೆ ಸೂಚಿಸಲಾಗಿತ್ತು.

ಅಶ್ಲೀಲ ಸಂದೇಶಗಳು, ಸಂಜ್ಞೆಗಳನ್ನು ಕಳುಹಿಸುವುದಲ್ಲದೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಸಂಪಾದಕರ ವಿರುದ್ಧ ನೀಡಿದ ದೂರಿನಲ್ಲಿ ಮಹಿಳೆಯರು ಆರೋಪಿಸಿದ್ದರು.

ಇತ್ತೀಚೆಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಬ್ಯೂರೊ ಮುಖ್ಯಸ್ಥ, ರಾಜಕೀಯ ಸಂಪಾದಕ ಪ್ರಶಾಂತ್ ಝಾ ಸ್ಥಾನ ತೊರೆದಿದ್ದರು.

ಇನ್ನಷ್ಟು:ಲೈಂಗಿಕ ಕಿರುಕುಳ ಆರೋಪ: ಸ್ಥಾನ ತೊರೆದ ಹಿಂದೂಸ್ತಾನ್ ಟೈಮ್ಸ್ ಬ್ಯೂರೊ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.