ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರಗಾಮಿಯೊಬ್ಬ ಹತನಾಗಿದ್ದಾನೆ.

ಉಗ್ರಗಾಮಿಗಳು ನೆಲೆಕಂಡುಕೊಂಡಿದ್ದಾರೆ ಎಂಬ ಖಚಿತ ಸುಳಿವು ದೊರೆತ ಭದ್ರತಾ ಸಿಬ್ಬಂದಿಯು ಶೋಪಿಯಾನ್ ಜಿಲ್ಲೆಯ ಹಾಂಜಿಪೊರಾ ವಲಯದಲ್ಲಿ ತೀವ್ರ ತಪಾಸಣಾ ಕಾರ್ಯ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಉಗ್ರರು ಮೊದಲಿಗೆ ಗುಂಡುಹಾರಿಸಿದ್ದು, ಹಿಂದೆಯೇ ಭದ್ರತಾ ಸಿಬ್ಬಂದಿಯು ತಕ್ಕ ಪ್ರತಿರೋಧ ತೋರಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಒಬ್ಬ ಉಗ್ರ ಹತನಾಗಿದ್ದು, ಆತ ಯಾವ ಗುಂಪಿಗೆ ಸೇರಿದವನು ಎಂಬುದು ಇನ್ನೂ ದೃಢಪಡಬೇಕಿದೆ. ಆ ನಂತರವು ಕೆಲಹೊತ್ತು ತಪಾಸಣಾ ಕಾರ್ಯ ನಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಶಸ್ತ್ರಾಸ್ತ್ರ ಕಳ್ಳಸಾಗಣೆ: 7 ತೆಹ್ರಿಕ್ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಒಳನುಸುಳುವಿಕೆ ಯತ್ನ ವಿಫಲ; ಶಸ್ತ್ರಾಸ್ತ್ರ, ಹೆರಾಯಿನ್ ವಶ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಅಪರಿಚಿತರ ಒಳನುಸುಳುವಿಕೆ ಯತ್ನವನ್ನು ಭದ್ರತಾ ಸಿಬ್ಬಂದಿ ವಿಫಲಗೊಳಿಸಿದ್ದಾರೆ.

ತಂಗ್ದಾರ್ ವಲಯದಲ್ಲಿ ಒಳನುಸುಳುವ ಯತ್ನ ನಡೆದಿತ್ತು. ಸ್ಥಳದಲ್ಲಿ ಕೆಲವು ಶಸ್ತ್ರಾಸ್ತ್ರ, ಮದ್ದುಗುಂಡುಗಳು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಕೆ–47 ರೈಫಲ್, ಪಿಸ್ತೂಲು, ಎರಡು ಗ್ರೆನೈಡ್‌ಗಳು, ಆರು ಪ್ಯಾಕೆಟ್ ಹೆರಾಯಿನ್ ಪತ್ತೆಯಾಗಿದ್ದು ಇವುಗಳ ಒಟ್ಟು ಮೌ್ಯ₹ 30 ಕೋಟಿ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.