ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೀಘ್ರದಲ್ಲೇ ವಂದೇ ಭಾರತ್‌ ಸ್ಲೀಪರ್‌ ರೈಲು: ಹೇಗಿರಲಿದೆ ಗೊತ್ತಾ ವಿನ್ಯಾಸ?

Published : 4 ಅಕ್ಟೋಬರ್ 2023, 2:35 IST
Last Updated : 4 ಅಕ್ಟೋಬರ್ 2023, 2:43 IST
ಫಾಲೋ ಮಾಡಿ
Comments

ನವದೆಹಲಿ: ಈಗಾಗಲೇ ದೇಶದಲ್ಲಿ ಹಲವು ಪ್ರದೇಶಗಳಲ್ಲಿ ವಂದೇ ಭಾರತ್‌ ರೈಲು ಮಿಂಚಿನ ವೇಗದಲ್ಲಿ ಸಂಚಾರ ಮಾಡುತ್ತಿದೆ. ಸದ್ಯ ಕುಳಿತುಕೊಂಡು ಹೋಗುವ ವ್ಯವಸ್ಥೆ ಮಾತ್ರ ಈ ರೈಲಿನಲ್ಲಿದೆ. ಮುಂಬರುವ ದಿನಗಳಲ್ಲಿ ವಂದೇ ಭಾರತ್‌ ಸ್ಲೀಪರ್‌ ರೈಲನ್ನು ಆರಂಭಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ಸ್ಲೀಪರ್‌ ವರ್ಶನ್‌ ವಂದೇ ಭಾರತ್‌ ರೈಲು ಬಂದರೆ ಅದರ ವಿನ್ಯಾಸ ಹೇಗಿರುತ್ತದೆ, ರೈಲಿನ ಒಳಗೆ ಯಾವೆಲ್ಲಾ ರೀತಿಯ ವ್ಯವಸ್ಥೆಗಳಿರುತ್ತವೆ ಎನ್ನುವ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ಮುಂಬರುವ ವಂದೇ ಭಾರತ್‌ ಸ್ಲೀಪರ್‌ ರೈಲುಗಳ ಪರಿಕಲ್ಪನೆ... ಶೀಘ್ರದಲ್ಲಿ ...2024 ರ ಆರಂಭ’ದಲ್ಲಿ ಎಂದು ಬರೆದುಕೊಂಡಿದ್ದಾರೆ.

ಚಿತ್ರಗಳಲ್ಲಿ ವಂದೇ ಭಾರತ್ ಸ್ಲೀಪರ್ ರೈಲುಗಳು ಎರಡು ಮತ್ತು ಮೂರು ಹಂತದ ಮಲಗುವ ಆಸನಗಳನ್ನು ಹೊಂದಿರುವುದನ್ನು ಕಾಣಬಹುದು. ಜತೆಗೆ ಆಕರ್ಷಕ ಲೈಟ್‌, ಪಕ್ಕದಲ್ಲಿ ವಸ್ತುಗಳನ್ನು ಇರಿಸಿಕೊಳ್ಳಲು ಇಟ್ಟಿರುವ ಶೆಲ್ಫ್‌ ರಿಚ್‌ ಲುಕ್‌ ನೀಡುತ್ತಿವೆ. ಬರ್ತ್‌ಗಳ ವಿನ್ಯಾಸವು ರಾಜಧಾನಿ ರೈಲು ಅಥವಾ ಇತರ ಪ್ರೀಮಿಯಂ ರೈಲುಗಳಲ್ಲಿರುವುದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಹೊಸ ಸ್ಲೀಪರ್ ವಂದೇ ಭಾರತ್ ರೈಲು ಮುಂದಿನ ವರ್ಷ ಯಾವಾಗ ಚಾಲನೆಗೊಳ್ಳಲಿದೆ ಎಂದು ಸಚಿವರು ಬಹಿರಂಗಪಡಿಸಿಲ್ಲ, 

ವಂದೇ ಭಾರತ್ ಸ್ಲೀಪರ್ ರೈಲುಗಳು ಪ್ರಯಾಣಿಕರಿಗೆ ದೂರದೂರಿಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಭಾರತದಲ್ಲಿ ಮೊದಲ ವಂದೇ ಭಾರತ್‌ ರೈಲು ಸಂಚಾರ ನವದೆಹಲಿ ಮತ್ತು ವಾರಾಣಸಿ ನಡುವೆ  ಫೆಬ್ರವರಿ 15, 2019ರಂದು ಆರಂಭವಾಗಿತ್ತು. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು.

ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನಲ್ಲಿ ತಯಾರಿಸಲಾದ ಈ ರೈಲು 'ಮೇಕ್-ಇನ್-ಇಂಡಿಯಾ' ಉಪಕ್ರಮದ ಸಂಕೇತವಾಗಿ ನಿಂತಿದೆ. ಅಲ್ಲದೆ ಭಾರತದ ಎಂಜಿನಿಯರ್‌ಗಳ ಸಾಮರ್ಥ್ಯವನ್ನು ಸೂಚಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT