ಡುಮ್ಕಾ: ಕೊರೊನಾ ವೈರಸ್ ತಡೆಗಾಗಿ ದೇಶಾದ್ಯಂತ ಲಾಕ್ಡೌನ್ ಘೋಷಿಸಿದ್ದ ಸಂದರ್ಭದಲ್ಲಿಮನೆಗೆ ತೆರಳಲುಡ್ರಾಪ್ ಕೇಳಿದ 16 ವರ್ಷದ ಬಾಲಕಿಯನ್ನು ಸ್ನೇಹಿತ ಸೇರಿದಂತೆ 10 ಜನರು ಅತ್ಯಾಚಾರ ಎಸಗಿರುವ ಘಟನೆ ಜಾರ್ಖಂಡ್ನ ಡುಮ್ಕಾದಲ್ಲಿನಡೆದಿದೆ.

ಬಾಲಕಿ ಡುಮ್ಕಾದಿಂದ ಮನೆಗೆ ಹಿಂತಿರುಗುತಿದ್ದವೇಳೆ ತನ್ನ ಸ್ನೇಹಿತನನ್ನು ಕರೆದು ಮನೆಗೆ ಡ್ರಾಪ್ ಕೊಡುವಂತೆ ಕೇಳಿದ್ದಾಳೆ. ಆಗ ಅವಳ ಸ್ನೇಹಿತ ತನ್ನ ಇತರೆ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರ ಎಸಗಿದ್ದಾರೆ. ಈ ಕುರಿತು ಎಫ್ಐಆರ್ ದಾಖಲಾಗಿದ್ದು, ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಸೂಪರಿಂಟೆಂಡೆಂಟ್ ವೈ.ಎಸ್. ರಮೇಶ್ ಎಎನ್ಐಗೆ ತಿಳಿಸಿದ್ದಾರೆ.

ಸಂತ್ರಸ್ತೆಯ ಹೇಳಿಕೆ ಪ್ರಕಾರ ಐಪಿಸಿ ಸೆಕ್ಷನ್ 323 ಮತ್ತು 376 ಡಿ ಮತ್ತು ಪೊಸ್ಕೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸದ್ಯ ಬಾಲಕಿಯು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.