ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತಾರೂಢ ಬಿಜೆಪಿ ಪಕ್ಷವು ಕಳೆದ ಒಂದೂವರೆ ವರ್ಷದಲ್ಲಿ ಮುಸ್ಲಿಮರ ವಿರುದ್ಧ ಅತಿ ಹೆಚ್ಚು ದ್ವೇಷ ಭಾಷಣ ಮಾಡಿದೆ ಎಂದು ವರದಿಯೊಂದು ಹೇಳಿದೆ.

ಮುಸ್ಲಿಮರನ್ನೇ ಗುರಿಯಾಗಿಸಿ ಮಾಡಿರುವ 255 ದ್ವೇಷ ಭಾಷಣಗಳಲ್ಲಿ ಶೇ 80ರಷ್ಟು ಬಿಜೆಪಿ ಆಡಳಿತದಲ್ಲಿರುವ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೇ ನಡೆದಿವೆ ಎಂದು ವಾಷಿಂಗ್ಟನ್ ಡಿಸಿಯ ‘ಹಿಂದುತ್ವ ವಾಚ್’ ಹೇಳಿರುವ ಕುರಿತು ಬ್ಲೂಮ್ಬರ್ಗ್ ಮಾಡಿರುವ ವರದಿ ಆಧರಿಸಿ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆ ಸುದ್ದಿ ಪ್ರಕಟಿಸಿದೆ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಮುಸ್ಲಿಮರ ವಿರುದ್ಧ ಹೇಳಿಕೆ ನೀಡುವ ಪದ್ಧತಿ ಚಾಲ್ತಿಗೆ ಬಂದಿತು. ಈಗ ಅದು ಏರುಮುಖವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ಈ ವರ್ಷ ನಡೆದ ಒಟ್ಟು ಪ್ರಕರಣಗಳಲ್ಲಿ ಅರ್ಧದಷ್ಟು ಬಿಜೆಪಿ ಆಡಳಿತವಿರುವ ಸರ್ಕಾರಗಳ ಬೆಂಬಲದಿಂದಲೇ ನಡೆದಿವೆ. ಉಳಿದವು ಬಿಜೆಪಿ ಬೆಂಬಲಿತ ಬಜರಂಗದಳ, ವಿಶ್ವ ಹಿಂದೂ ಪರಿಷತ್, ಸಕಾಲ ಹಿಂದೂ ಸಮಾಜದಿಂದ ನಡೆದಿವೆ. ಈ ಸಂಘಟನೆಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ನೇರ ಸಂಬಂಧ ಹೊಂದಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ವರದಿ ಸಂಪೂರ್ಣ ಆಧಾರ ರಹಿತ ಎಂದು ಹೇಳಿರುವ ಬಿಜೆಪಿಯ ಹಿರಿಯ ಮುಖಂಡ ಅಭಯ್ ವರ್ಮಾ, ‘ಧರ್ಮದ ಆಧಾರದಲ್ಲಿ ನಾವು ದೇಶ ಮತ್ತು ಜನರನ್ನು ವಿಭಜಿಸುತ್ತಿಲ್ಲ. ದ್ವೇಷ ಭಾಷಣವನ್ನು ಬಿಜೆಪಿ ಎಂದಿಗೂ ಬೆಂಬಲಿಸುವುದಿಲ್ಲ’ ಎಂದಿದ್ದಾರೆ.

ದೇಶದ ಅಪರಾಧ ದಳವು ದ್ವೇಷ ಭಾಷಣ ಕುರಿತ ಪ್ರಕರಣಗಳನ್ನು ದಾಖಲಿಸುವುದನ್ನು 2017ರಲ್ಲಿ ನಿಲ್ಲಿಸಿದ ನಂತರ ಪ್ರಕಟಗೊಂಡ ಮೊದಲ ಖಾಸಗಿ ವರದಿ ಇದಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಪ್ರಕಟಗೊಂಡಿರುವ ಸುದ್ದಿಗಳನ್ನು ಆಧರಿಸಿ ‘ಹಿಂದುತ್ವ ವಾಚ್’ ಈ ವರದಿಯನ್ನು ಸಿದ್ಧಪಡಿಸಿದೆ. ಲಭ್ಯವಾದ ವಿಡಿಯೊ ದಾಖಲಾತಿಯನ್ನು ಆಧರಿಸಿ ಡಾಟಾ ಸ್ಕ್ರಾಪಿಂಗ್ ತಂತ್ರಜ್ಞಾನ ಬಳಸಿರುವ ಸಂಶೋಧಕರು ವರದಿ ಸಿದ್ಧಪಡಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್ನಲ್ಲೇ ಅತಿ ಹೆಚ್ಚು ದ್ವೇಷ ಭಾಷಣ ಪ್ರಕರಣಗಳು ಜರುಗಿವೆ. ಅದರಲ್ಲೂ ಚುನಾವಣೆ ಹೊಸ್ತಿಲಲ್ಲಿರುವಾಗ ಇಂಥ ಪ್ರಕರಣಗಳು ನಡೆದಿರುವುದೇ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶದ 15 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಅಧ್ಯಯನಕ್ಕಾಗಿ ಪರಿಗಣಿಸಲಾಗಿತ್ತು. ಇದರಲ್ಲಿ ಮತಾಂತರಕ್ಕಾಗಿ ಹಿಂದು ಮಹಿಳೆಯರನ್ನು ಮುಸ್ಲಿಮರು ಮದುವೆಯಾಗುತ್ತಿದ್ದಾರೆ (ಲವ್ ಜಿಹಾದ್) ಎಂಬ ಆರೋಪ ಮಾಡಿರುವುದು ಶೇ 64ರಷ್ಟು, ಮುಸ್ಲಿಮರಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿ ಶೇ 33ರಷ್ಟು, ಮುಸ್ಲಿಮರನ್ನು ಬಹಿಷ್ಕರಿಸಿ ಎಂದಿರುವುದು ಶೇ 11ರಷ್ಟು, ಉಳಿದವು ಮುಸ್ಲಿಂ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮಾಡಿರುವ ಅಶ್ಲೀಲ ಹೇಳಿಕೆಗಳು ಸೇರಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

‘ದ್ವೇಷ ಭಾಷಣಗಳನ್ನು ಹತ್ತಿಕ್ಕುವ ಬದಲಾಗಿ, ಸರ್ಕಾರಿ ಅಧಿಕಾರಿಗಳು ಕೆಲವೆಡೆ ತಾವೇ ಇಂಥವುಗಳಲ್ಲಿ ಭಾಗಿಯಾದ ಉದಾಹರಣೆಗಳೂ ಇವೆ. ಬಿಜೆಪಿ ಆಡಳಿತವಿರುವ ಸರ್ಕಾರಗಳ ಮುಖ್ಯಮಂತ್ರಿ, ಜನಪ್ರತಿನಿಧಿಗಳು ಹಾಗೂ ಪಕ್ಷದ ಹಿರಿಯ ಮುಖಂಡರೂ ಪಾಲ್ಗೊಂಡಿದ್ದಾರೆ’ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.