ಚಂಡೀಗಡ : ‘ಮೋದಿಜೀ ಅವರ ಆಡಳಿತ ಕಾಣುತ್ತಿರುವುದು ಜಾಹೀರಾತುಗಳಲ್ಲಿ ಮಾತ್ರ. ವಾಸ್ತವದಲ್ಲಿ ಆಡಳಿತವೇ ಇಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಲೇವಡಿ ಮಾಡಿದ್ದಾರೆ.

ಇಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದಾರೆ.

‘ಮೋದಿಜೀ ಅವರ ಆಡಳಿತ ಜಾಹೀರಾತುಗಳಲ್ಲಿ ಮಾತ್ರ ಗೋಚರಿಸುತ್ತದೆ. ದೇಶದಲ್ಲಿ ಆಡಳಿತವೇ ಇಲ್ಲ. ಆಡಳಿತ ಇದ್ದಿದ್ದರೆ, ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಇರುತ್ತಿರಲಿಲ್ಲ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿರಲಿಲ್ಲ. ಆಡಳಿತ ಇರುತ್ತಿದ್ದಿದ್ದರೆ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಇರುವ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಮೋದಿ ಅವರು ತಮ್ಮ ಗೆಳೆಯರಿಗೆ ಮಾರಾಟ ಮಾಡುತ್ತಿರಲಿಲ್ಲ’ ಎಂದು ಪ್ರಿಯಾಂಕಾ ಅವರು ಲೇವಡಿ ಮಾಡಿದ್ದಾರೆ.

‘ದೇಶದ ಬಡಜನರು, ಸಣ್ಣ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಿಗಳು ತೀರಾ ಸಂಕಷ್ಟದಲ್ಲಿ ಇದ್ದಾರೆ. ಅವರ ಬಗ್ಗೆ ಮೋದಿ ಸರ್ಕಾರದ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ, ಅದೇ ಮೋದಿ ಸರ್ಕಾರವು ಜಾಹೀರಾತಿಗಾಗಿ ₹2,000 ಕೋಟಿ ವೆಚ್ಚ ಮಾಡುತ್ತಿದೆ’ ಎಂದು ಅವರು ಟೀಕಿಸಿದ್ದಾರೆ.

‘ಬಿಜೆಪಿ ಮತ್ತು ಎಎಪಿ ನಾಯಕರು ಪಂಜಾಬಿತನದ ಬಗ್ಗೆ ಮಾತನಾಡುತ್ತಾರೆ. ಅವರು ಪಂಜಾಬಿತನದ ಬಗ್ಗೆ ಮಾತನಾಡಿದ್ದನ್ನು ಕೇಳಿದರೆ, ನನಗೆ ನಗು ಬರುತ್ತದೆ. ಅವರಿಗೆ ಪಂಜಾಬಿತನ ಅರ್ಥವಾಗುವುದಾದರೂ ಹೇಗೆ? ಅದು ಅರ್ಥವಾಗಬೇಕೆಂದರೆ ಅವರು ಇಲ್ಲಿ ಜೀವನ ನಡೆಸಬೇಕು. ಅದೊಂದು ಭಾವನಾತ್ಮಕ ವಿಚಾರ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.