‘ಆದಿತ್ಯ ಎಲ್1’ ಅಂತರಿಕ್ಷ ವೀಕ್ಷಣಾಲಯ ಹೊತ್ತಿದ್ದ ಪಿಎಸ್‌ಎಲ್‌ವಿ ವಾಹಕವು ಶನಿವಾರ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು –ಪಿಟಿಐ ಚಿತ್ರ
‘ಆದಿತ್ಯ ಎಲ್1’ ಅಂತರಿಕ್ಷ ವೀಕ್ಷಣಾಲಯವಿದ್ದ ಪಿಎಸ್‌ಎಲ್‌ವಿ ಉಡ್ಡಯನ ಕಾರ್ಯಕ್ಕೆ ಸಾಕ್ಷಿಯಾಗಲು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಬಳಿ ಸೇರಿದ್ದ ಸಮೂಹ –ಪಿಟಿಐ ಚಿತ್ರ
ನಭದತ್ತ ಚಿಮ್ಮಿದ ಪಿಎಸ್‌ಎಲ್‌ವಿ ಸಿ57 ವಾಹಕವು ಶನಿವಾರ ರಾಷ್ಟ್ರಧ್ವಜದ ಹಿನ್ನೆಲೆಯಲ್ಲಿ ಕಂಡುಬಂದಿದ್ದು ಹೀಗೆ –ಪಿಟಿಐ ಚಿತ್ರ
ಚಂದ್ರಯಾನ–3ರ ರೋವರ್ ‘ಪ್ರಜ್ಞಾನ್’ ಚಂದಿರನ ಅಂಗಳದಲ್ಲಿ 100 ಮೀಟರ್‌ವರೆಗೂ ಕ್ರಮಿಸಿರುವ ಚಿತ್ರವನ್ನು ಇಸ್ರೊ ಬಿಡುಗಡೆ ಮಾಡಿದೆ –ಪಿಟಿಐ ಚಿತ್ರ
‘ಆದಿತ್ಯ ಎಲ್1’ ಅಂತರಿಕ್ಷ ವೀಕ್ಷಣಾಲಯ ಹೊತ್ತಿದ್ದ ಪಿಎಸ್‌ಎಲ್‌ವಿ ವಾಹಕವು ಶನಿವಾರ ಶ್ರೀಹರಿಕೋಟದ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು –ಪಿಟಿಐ ಚಿತ್ರ
ಆದಿತ್ಯ ಎಲ್1’ ಯಶಸ್ವಿ ಉಡ್ಡಯನಕ್ಕಾಗಿ ವಿಜ್ಞಾನಿಗಳಿಗೆ ಅಭಿನಂದನೆಗಳು. ಖಗೋಳವನ್ನು ಇನ್ನಷ್ಟು ವಿಸ್ತೃತವಾಗಿ ಅರ್ಥಮಾಡಿಕೊಳ್ಳಲು ಹಾಗೂ ಇಡೀ ಮನುಕುಲದ ಕಲ್ಯಾಣದ ಅಭಿವೃದ್ಧಿಗಾಗಿ ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ಅವಿರತ ಪ್ರಯತ್ನ ಮುಂದುವರಿಯಲಿದೆ
ನರೇಂದ್ರ ಮೋದಿ ಪ್ರಧಾನಮಂತ್ರಿ ಆದಿತ್ಯ ಎಲ್1 ಯಶಸ್ವಿ ಉಡ್ಡಯನವು ಭಾರತ ಮತ್ತು ಇಸ್ರೊದ ದೃಷ್ಟಿಯಿಂದ ಮತ್ತೊಂದು ಅದ್ವಿತೀಯ ಸಾಧನೆ. ಇಸ್ರೊಗೆ ಅಭಿನಂದಿಸುವ ಜೊತೆಗೆ ಅದರ ಯಶಸ್ಸಿನ ಪಯಣವನ್ನೂ ಮೆಲುಕು ಹಾಕುವುದು ಸ್ತುತ್ಯರ್ಹವಾದುದು.
ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ