ನವದೆಹಲಿ:ಮೋಟಾರು ವಾಹನ ಕಾಯ್ದೆ ಜಾರಿಯಾದ ಮೊದಲ ದಿನವೇ (ಸೆಪ್ಟೆಂಬರ್ 01) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 3900 ಜನರಿಗೆಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.

ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ, ತುರ್ತು ವಾಹನಗಳಿಗೆ ತಡೆ, ಅತಿ ವೇಗ, ಸಿಗ್ನಲ್ ಜಂಪ್, ವ್ಹೀಲಿಂಗ್ ಮಾಡಿದ ಆರೋಪ ಸೇರಿದಂತೆ ವಿವಿಧ ಪ್ರಕರಣಗಳ ಅಡಿಯಲ್ಲಿ ದಂಡ ವಿಧಿಸಲಾಗಿದೆ. ಭಾನುವಾರ ಸಂಜೆ 7ರ ವೇಳೆಗೆ ಸುಮಾರು 3,900 ಜನರಿಗೆ ದಂಡ ವಿಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಿಕರವಾದ ಅಂಕಿ–ಅಂಶಗಳು ಇನ್ನೂ ಲಭ್ಯವಾಗಿಲ್ಲ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸ್ಪಷ್ಟ ಮಾಹಿತಿ ಇಂದು(ಸೋಮವಾರ) ದೊರೆಯುತ್ತದೆ’ ಎಂದು ಸಂಚಾರಿ ಪೊಲೀಸ್ ಆಯಕ್ತ ನರೇಂದ್ರ ಸಿಂಗ್ ಬುಂಡೇಲಾ ಹೇಳಿದ್ಧಾರೆ.

2018ರಲ್ಲಿ ಒಟ್ಟು 67,04,560 ದಂಡ ವಿಧಿಸಿದ ಅಂಕಿ ಅಂಶವಿದೆ. ಅದರಂತೆ ಪ್ರತಿದಿನ ಸರಾಸರಿ 19,000 ಜನರಿಗೆ ದಂಡ ಹಾಕಿದ ಅಂದಾಜಿಸಲಾಗಿದೆ. 2017ರಲ್ಲಿ ಒಟ್ಟು 62,87,486 ಜನರಿಗೆ ದಂಡ ಹಾಕಲಾಗಿತ್ತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.