ಗ್ವಾಲಿಯರ್: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೊ ರಾಷ್ಟ್ರೀಯ ಉದ್ಯಾನದಿಂದ ಹೆಣ್ಣು ಚೀತಾವೊಂದು ತಪ್ಪಿಸಿಕೊಂಡು ಪಕ್ಕದ ಗ್ವಾಲಿಯರ್ನ ಕಾಡಿಗೆ ತಲುಪಿದ್ದು ಸ್ಥಳೀಯ ರೈತರಿಗೆ ಎಚ್ಚರಿಕೆಯಿಂದಿರುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ವೀರಾ ಹೆಸರಿನ ಹೆಣ್ಣು ಚೀತಾ ಕುರಿಯನ್ನು ಅರಸುತ್ತಾ ಗ್ವಾಲಿಯರ್ ತಲುಪಿದೆ. ಗ್ವಾಲಿಯರ್ ಮತ್ತು ಮೊರೆನಾ ಭಾಗದ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳ ರೈತರಿಗೆ ಎಚ್ಚರಿಕೆ ನೀಡಲಾಗಿದ್ದು, ಜಾನುವಾರುಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ. ಅರಣ್ಯ ಅಧಿಕಾರಿಗಳು ಚೀತಾದ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಚೀತಾ ವಾಪಸ್ ರಾಷ್ಟ್ರೀಯ ಉದ್ಯಾನಕ್ಕೆ ಮರಳುವಂತೆ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 4 ರಂದು ಪವನ್ ಎನ್ನುವ ಗಂಡು ಚೀತಾ ಕೂಡ ರಾಷ್ಟ್ರೀಯ ಉದ್ಯಾನದಿಂದ ತಪ್ಪಿಸಿಕೊಂಡು ರಾಜಸ್ಥಾನದ ಕರೋಲಿ ಜಿಲ್ಲೆಗೆ ತಲುಪಿತ್ತು. ಅದನ್ನು ರಕ್ಷಿಸಿ ವಾಪಸ್ ಕರೆತರಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ವಿಶ್ಲೇಷಣೆ | ಕುನೊ ಉದ್ಯಾನ: ಚೀತಾಗಳ ಸಾವೇಕೆ?.ಕುನೊ ರಾಷ್ಟ್ರೀಯ ಉದ್ಯಾನವನ: 3 ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದ ಚೀತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.