ಮುಂಬೈ:ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ವೇಳೆ ಸಂಸತ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡ ಸಂಗತಿ ವ್ಯಾಪಕ ಚರ್ಚೆಯಾಗಿದ್ದಷ್ಟೇ ಅಲ್ಲ, ಆ ಕ್ಷಣದ ಚಿತ್ರ ಈಗ ಕಾಂಗ್ರೆಸ್ನ ಫ್ಲೆಕ್ಸ್ನಲ್ಲೂ ರಾರಾಜಿಸುತ್ತಿದೆ!

ರಾಹುಲ್ ಗಾಂಧಿ ಅವರು ಮೋದಿ ಅವರನ್ನು ಅಪ್ಪಿಕೊಂಡಿರುವ ಚಿತ್ರವನ್ನು ಮುದ್ರಿಸಿ ದೊಡ್ಡ ಗಾತ್ರದ ಫ್ಲೆಕ್ಸ್ವೊಂದನ್ನು ಮುಂಬೈ ಕಾಂಗ್ರೆಸ್ ಸಾರ್ವಜನಿಕ ಸ್ಥಳದಲ್ಲಿ ಹಾಕಿದೆ.

ಮುಂಬೈನ ಅಂಧೇರಿಯಲ್ಲಿ ಈ ಫ್ಲೆಕ್ಸ್ ಹಾಕಲಾಗಿದೆ. ಫ್ಲೆಕ್ಸ್ನಲ್ಲಿ ‘ಕೋಪದಿಂದಲ್ಲ, ಪ್ರೀತಿಯಿಂದ ಮಾತ್ರ ಗೆಲುವು ಸಾಧ್ಯ’ ಎಂಬ ಒಕ್ಕಣೆಯನ್ನೂ ದಪ್ಪ ಅಕ್ಷರದಲ್ಲಿ ಬರೆಯಲಾಗಿದೆ. ಈ ಬಗ್ಗೆ ಎಎನ್ಐ ವರದಿ ಮಾಡಿದೆ.

ಮುಂಬೈ ಕಾಂಗ್ರೆಸ್ನ ಅಧ್ಯಕ್ಷ ಸಂಜಯ್ ನಿರುಪಮ್ ಅವರು ಈ ಪ್ಲೆಕ್ಸ್ ಹಾಕಿಸಿದ್ದಾರೆ. ಅದರಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಭಾವಚಿತ್ರದ ಜತೆಗೆ ತಮ್ಮ ಚಿತ್ರವನ್ನೂ ಹಾಕಿಸಿಕೊಂಡಿದ್ದಾರೆ. ಇದರ ಪೋಸ್ಟ್ವೊಂದನ್ನು ಟ್ವೀಟ್ ಸಹ ಮಾಡಿದ್ದಾರೆ.

ಸದನದಲ್ಲಿ ನರೇಂದ್ರ ಮೋದಿ ಅವರನ್ನು ಕೆಲ ಕ್ಷಣ ತಬ್ಬಿಬ್ಬುಗೊಳಿಸಿದ್ದ ಆ ಅಪ್ಪುಗೆ, ಹಾಸ್ಯದ ಸರಕೂ ಆಗಿದೆ. ರಾಹುಲ್ ಅಪ್ಪುಗೆ ಪಡೆದ ಮೋದಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳೂವುದು ಒಳಿತು ಎಂಬ ಸಲಹೆಗಳೂ ಬಂದಿವೆ.

ಈ ನಡುವೆ ಅಮೂಲ್, ‘ಅಪ್ಪುಗೆಯೇ? ಮುಜುಗರವೇ?’ ಎಂಬ ಶೀರ್ಷಿಕೆ ನೀಡಿ, 'ಪ್ರತಿದಿನ ಅಪ್ಪುಗೆಯ ಬ್ರೆಡ್!’ ಎಂದು ಉಲ್ಲೇಖಿಸಿ ಪ್ರಕಟಿಸಿರುವ ರಾಹುಲ್ ಮೋದಿ ಅಪ್ಪುಗೆಯ ಕಾರ್ಟೂನ್ ಟ್ರೋಲ್ ಆಗಿ ಸದ್ದು ಮಾಡಿದೆ.

* ಇದನ್ನೂ ಓದಿ...
*ಟ್ರೋಲ್ ಆಯ್ತು ಅಮೂಲ್ನ ರಾಹುಲ್ 'ಅಪ್ಪುಗೆ'ಯ ಕಾರ್ಟೂನ್

*ರಾಹುಲ್ ಅಪ್ಪಿಕೋ ಆಂದೋಲನ

*'ರಾಹುಲ್ ಅಪ್ಪುಗೆ ಪಡೆದ ಮೋದಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು'

*ಲೋಕಸಭೆಯೊಳಗೆ ತಬ್ಬುಗೆ: ಪ್ರತಿಕ್ರಿಯೆ ಇಬ್ಬಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.