ಮುಂಬೈ: ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ (ಎಸ್ಎಂಎ) ಬಳಲುತ್ತಿದ್ದ 5 ತಿಂಗಳ ಮಗುವಿನ ಚಿಕಿತ್ಸೆಗಾಗಿ ₹16 ಕೋಟಿ ಹಣ (ಕ್ರೌಡ್ಫಂಡಿಂಗ್) ಸಂಗ್ರಹವಾಗಿದ್ದು, ದಾನಿಗಳಿಗೆ ಮಗುವಿನ ಪೋಷಕರು ಧನ್ಯವಾದ ಸಲ್ಲಿಸಿದ್ದಾರೆ.

ಮುಂಬೈನ ಮಗು ಟೀರಾ ಕಾಮತ್ ಚಿಕಿತ್ಸೆಗೆ ₹22 ಕೋಟಿ ಹಣದ ಅಗತ್ಯತೆ ಇತ್ತು. ಅಷ್ಟೊಂದು ವೆಚ್ಚ ಭರಿಸಲು ಪೋಷಕರಿಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಪ್ರಿಯಾಂಕಾ ಮತ್ತು ಮಿಹೀರ್ ಕಾಮತ್ ದಂಪತಿ ಧನಸಹಾಯ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಭಾರತ, ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ಜನರು ವೆಬ್ಸೈಟ್ ಮೂಲಕ ದೇಣಿಗೆ ನೀಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

‘ಇದು ದಾಖಲೆಯ ಅಭಿಯಾನವಾಗಿದೆ. ಜನಸಮೂಹದಿಂದ ಒಬ್ಬ ವ್ಯಕ್ತಿ ಇಷ್ಟು ದೊಡ್ಡ ಮೊತ್ತವನ್ನು ಎಂದಿಗೂ ಗಳಿಸಿರಲಿಲ್ಲ. 87 ಸಾವಿರ ಜನರು ಸರಾಸರಿ ₹1,750ದಂತೆ ದಾನ ಮಾಡಿದ್ದಾರೆ. ಈ ಅಭಿಯಾನ ವೈದ್ಯಕೀಯ ಹಣದ ಅಗತ್ಯವಿರುವವರಿಗೆ ಭರವಸೆ ಮೂಡಿಸುತ್ತದೆ’ ಎಂದು ಇಂಪ್ಯಾಕ್ಟ್ ಗುರು ಸಿಇಒ ಪಿಯೂಷ್ ಜೈನ್ ತಿಳಿಸಿದ್ದಾರೆ.

ಪೋಷಕರ ಮನವಿಗೆ ಸ್ಪಂದಿಸಿದ್ದ ಕೇಂದ್ರ ಸರ್ಕಾರ, ಮಗುವಿಗೆ ಬೇಕಾದ ಔಷಧಿ ಮೇಲಿನ ಆಮದು ಸುಂಕ ಮತ್ತು ಔಷಧಿಗಳ ಮೇಲಿನ ಜಿಎಸ್ಟಿ ₹ 6 ಕೋಟಿಯನ್ನು ಮನ್ನಾ ಮಾಡಿತ್ತು.

ಇದನ್ನೂ ಓದಿ...5 ತಿಂಗಳ ಮಗುವಿನ ಔಷಧಿ ಮೇಲಿನ ₹ 6 ಕೋಟಿ ಆಮದು ತೆರಿಗೆ ಮನ್ನಾ ಮಾಡಿದ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.