ನವದೆಹಲಿ: ಮುಜಫ್ಫರ್ಪುರ ಬಾಲಿಕಾ ಗೃಹದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯಗಳ ಪ್ರಕರಣದ ತನಿಖೆ ಕುರಿತು ವರದಿ ಮಾಡದಂತೆ ಪಟ್ನಾ ಹೈಕೋರ್ಟ್ ನೀಡಿರುವ ಆದೇಶವನ್ನು ಭಾರತೀಯ ಸಂಪಾದಕರ ವೇದಿಕೆ ಖಂಡಿಸಿದೆ.

ಈ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ವೇದಿಕೆ ಕೋರಿದೆ.

ಈ ರೀತಿಯ ಸಾರ್ವಜನಿಕ ಮಹತ್ವದ ವಿಷಯಗಳ ಮೇಲೆ ನಿರ್ಬಂಧ ಹೇರುವುದು ಸಲ್ಲದು. ಪ್ರಜಾಪ್ರಭುತ್ವದ ಸ್ತಂಭಗಳಲ್ಲಿ ಒಂದಾದ ಮಾಧ್ಯಮಗಳ ಮೇಲೆ ಇತ್ತೀಚೆಗೆ ನ್ಯಾಯಾಲಯಗಳು ಅಂಕುಶ ಹಾಕುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. ಮಾಧ್ಯಮಗಳ ಸ್ವಾತಂತ್ರ್ಯ ಕಾಪಾಡುವಲ್ಲಿ ಮುಂಚೂಣಿಯಲ್ಲಿರ ಬೇಕಾದ ನ್ಯಾಯಾಲಯಗಳೇ ನಿರ್ಬಂಧ ಹೇರುವ ಮೂಲಕ ದಮನಕಾರಿ ನೀತಿ ಅನುಸರಿಸುವ ಮಾರ್ಗದಲ್ಲಿ ಸಾಗುತ್ತಿವೆ ಎಂದು ವೇದಿಕೆ ಆತಂಕ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.