ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ ಸರ್ಕಾರ, ನಾಳೆ ಪ್ರಮಾಣ: ಪದಗ್ರಹಣಕ್ಕೆ ಗಣ್ಯರ ಹಾಜರಿ

Published : 7 ಜೂನ್ 2024, 15:47 IST
Last Updated : 7 ಜೂನ್ 2024, 23:35 IST
ಫಾಲೋ ಮಾಡಿ
Comments
ಕಾಂಗ್ರೆಸ್‌ ವಿರುದ್ಧ ಮೋದಿ ಚಾಟಿ
l ಈ ಚುನಾವಣೆಯಲ್ಲಿ ವಿರೋಧ ಪಕ್ಷಕ್ಕೆ 100 ಸ್ಥಾನಗಳ ಗಡಿ ತಲುಪಲು ಸಾಧ್ಯವಾಗಿಲ್ಲ. ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಅವರ ಒಟ್ಟು ಸ್ಥಾನಗಳು ಈ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಗಳಿಸಿದ್ದಕ್ಕಿಂತ ಕಡಿಮೆ l ಪ್ರಜಾಪ್ರಭುತ್ವದ ಮೇಲೆ ಜನರು ಹೊಂದಿರುವ ನಂಬಿಕೆಯನ್ನು ನಾಶ ಮಾಡಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿವೆ. ಎನ್‌ಡಿಎ ಮೈತ್ರಿಕೂಟದ ಚುನಾವಣಾ ಗೆಲುವಿನ ಮೇಲೆ ತಮ್ಮ ಸೋಲಿನ ಛಾಯೆ ಬೀರುತ್ತಿವೆ l ವಿರೋಧ ಪಕ್ಷದ ಮುಖಂಡರು ಇವಿಎಂಗಳ ಶವಯಾತ್ರೆ ನಡೆಸುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ, ಜೂನ್‌ 4ರ ಸಂಜೆ ವೇಳೆಗೆ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆ, ಅವರು ಮೌನವಾಗಿದ್ದರು. ಇದು ಭಾರತದ ಪ್ರಜಾಪ್ರಭುತ್ವದ ಶಕ್ತಿ. ಇನ್ನು ಐದು ವರ್ಷ ಇವಿಎಂಗಳ ಬಗ್ಗೆ ತಕರಾರುಗಳು ಇರುವುದಿಲ್ಲ ಎಂದು ಭಾವಿಸಿದ್ದೇನೆ. 2029ರಲ್ಲಿ ಮತ್ತೆ ಗದ್ದಲ ಎಬ್ಬಿಸಬಹುದು
‘ಭ್ರಮೆಯಿಂದ ಹೊರಬಂದ ಕರ್ನಾಟಕದ ಜನ’
‘ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಇತ್ತೀಚೆಗೆ ನೂತನ ರಾಜ್ಯ ಸರ್ಕಾರಗಳು ರಚನೆಯಾಗಿದ್ದವು. ಆದರೆ. ಜನರ ನಂಬಿಕೆಯು ಕ್ಷಣಗಳಲ್ಲಿ ಮುರಿದು ಬಿದ್ದು ಅವರು ಭ್ರಮೆಯಿಂದ ಹೊರಗೆ ಬಂದರು. ಈ ಚುನಾವಣೆಯಲ್ಲಿ ಎರಡೂ ರಾಜ್ಯಗಳ ಜನರು ಎನ್‌ಡಿಎಯನ್ನು ಒಪ್ಪಿಕೊಂಡರು’ ಎಂದು ಮೋದಿ ವಿಶ್ಲೇಷಿಸಿದರು. ‘ತಮಿಳುನಾಡಿನಲ್ಲಿ ನಾವು ಯಾವುದೇ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಆದರೆ, ಮತ ಹಂಚಿಕೆ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ನಮ್ಮ ಭವಿಷ್ಯ ಏನು ಎಂಬುದಕ್ಕೆ ಸ್ಪಷ್ಟ ಸಂದೇಶ ಸಿಕ್ಕಿದೆ. ಕೇರಳದಲ್ಲಿ ನಮ್ಮ ನೂರಾರು ಕಾರ್ಯಕರ್ತರು ತ್ಯಾಗ ಬಲಿದಾನ ಮಾಡಿದ್ದಾರೆ. ಪ್ರಥಮ ಬಾರಿಗೆ ಕೇರಳದ ಪ್ರತಿನಿಧಿ ಹೊಂದಿದ್ದೇವೆ’ ಎಂದರು.
ಅಡ್ವಾಣಿ, ಜೋಶಿ ಭೇಟಿ
ಲೋಕಸಭೆಯಲ್ಲಿ ಬಿಜೆಪಿ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ, ಮೋದಿ ಅವರು ಪಕ್ಷದ ಹಿರಿಯ ನಾಯಕ ಲಾಲ್‌ ಕೃಷ್ಣ ಅಡ್ವಾಣಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರ ಪಕ್ಷದ ಮಾಜಿ ಅಧ್ಯಕ್ಷ ಮುರಳಿ ಮನೋಹರ್‌ ಜೋಶಿ ಅವರ ನಿವಾಸಕ್ಕೆ ತೆರಳಿ ಸಮಾಲೋಚಿಸಿದರು. ಇದಾದ ಬಳಿಕ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನೂ ಮೋದಿ ಭೇಟಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT