ನವದೆಹಲಿ: ‘ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿ ಅಭಯಾರಣ್ಯವೆನಿಸಿದ ಪ್ರತಿ ಸಂರಕ್ಷಿತ ಅರಣ್ಯವು ಗಡಿರೇಖೆಯಿಂದ ಕನಿಷ್ಠ ಒಂದು ಕಿ.ಮೀ.ವರೆಗೆ ಪರಿಸರ ಸೂಕ್ಷ್ಮ ವಲಯ (ಇಎಸ್ಜಡ್) ಹೊಂದಿರಬೇಕು. ಅಲ್ಲಿ ಗಣಿಗಾರಿಕೆ ಮತ್ತು ಇತರ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗದು’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದಎಲ್.ನಾಗೇಶ್ವರ ರಾವ್, ಬಿ.ಆರ್. ಗವಾಯಿ ಮತ್ತು ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠವು, ರಾಜಸ್ಥಾನದ ವನ್ಯಜೀವಿ ಅಭಯಾರಣ್ಯ ‘ಜಮ್ವಾ ರಾಮ್ಗಡ’ ಮತ್ತು ಸುತ್ತಮುತ್ತಲಿನ ಗಣಿಗಾರಿಕೆ ಚಟುವಟಿಕೆಗಳ ವಿವಾದದ ವಿಚಾರಣೆ ನಡೆಸುವಾಗ, ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳ ಸುತ್ತಲಿನ ಇಎಸ್ಜೆಡ್ ನಿಗದಿಪಡಿಸಲು ನಿರ್ದೇಶನ ನೀಡಿದೆ.

ಗೋವಾ ಫೌಂಡೇಶನ್ ಪ್ರಕರಣದಲ್ಲಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಪ್ರಸ್ತಾವನೆ ಸಲ್ಲಿಸದ ಅಭಯಾರ ಣ್ಯಗಳು ಅಥವಾ ರಾಷ್ಟ್ರೀಯ ಉದ್ಯಾ ನಗಳಿಗೆ ಸಂಬಂಧಿಸಿ 2006ರ ಡಿ. 4ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪ್ರಕಾರ 10 ಕಿ.ಮೀ. ಬಫರ್ ವಲಯವನ್ನು ಇಎಸ್ಜಡ್ ಆಗಿ ಪರಿಗಣಿಸಬೇಕು. 2011ರಫೆ. 9 ರಂದು ಹೊರಡಿಸಿರುವ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು ಎಂದುಪೀಠ ನಿರ್ದೇಶನ ನೀಡಿದೆ.

ಎಲ್ಲ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳಇಎಸ್ಜಡ್ಗೆ ಸಂಬಂಧಿಸಿದ ಮಾರ್ಗಸೂಚಿಗಳು ಸರಿಯಾಗಿ ಪಾಲನೆಯಾಗಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಗೃಹ ಕಾರ್ಯದರ್ಶಿಯವರಿಗೆ ನ್ಯಾಯಾಲಯ ಆದೇಶಿಸಿದೆ.

‘ಬಿ ವರ್ಗದ ಸಂರಕ್ಷಿತ ಅರಣ್ಯಗಳಿಗೆ ಸಂಬಂಧಿಸಿ ಕೇಂದ್ರದ ಉನ್ನಾಧಿಕಾರ ಸಮಿತಿ ನೀಡಿರುವ ಶಿಫಾರಸುಗಳಂತೆ ಇಎಸ್ಜೆಡ್ ಕನಿಷ್ಠ 1 ಕಿ.ಮೀ. ಇರಲೇಬೇಕೆನ್ನುವುದು ನಮ್ಮ ಅಭಿಮತ.ವಿಶೇಷ ಸಂದರ್ಭಗಳಲ್ಲಿ ಬದಲಾವಣೆಗಳಿಗೆ ಒಳಪಟ್ಟು, ಇದು ಪ್ರಮಾಣಿತ ಸೂತ್ರ ವಾಗಿದೆ’ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.