ಕೊಚ್ಚಿ: ಇಲ್ಲಿರುವ ನೌಕಾಪಡೆಯ ವಾಯು ನೆಲೆಯಲ್ಲಿ ಶನಿವಾರ ನಡೆದ ಚೇತಕ್ ಹೆಲಿಕಾಪ್ಟರ್‌ನ ಅಪಘಾತದಿಂದಾಗಿ ಕರ್ತವ್ಯದಲ್ಲಿದ್ದ ನೌಕಾಪಡೆಯ ನಾವಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಈ ಘಟನೆಯ ಬಗ್ಗೆ ನೌಕಾಪಡೆಯು ತನಿಖೆಗೆ ಆದೇಶಿಸಿದೆ. ದಕ್ಷಿಣ ನೌಕಾ ಕಮಾಂಡ್‌ನ ಐಎನ್‌ಎಸ್ ಗರುಡಾದಲ್ಲಿ ದೈನಂದಿನ ತಪಾಸಣೆ ವೇಳೆ ಈ ಘಟನೆ ಸಂಭವಿಸಿದೆ. ಮೃತಪಟ್ಟ ನಾವಿಕ ಮಧ್ಯಪ್ರದೇಶದ ಯೋಗೇಂದ್ರ ಸಿಂಗ್. ಇವರು ಲೀಡಿಂಗ್ ಏರ್ ಮೆಕ್ಯಾನಿಕ್ (ಎಲ್‌ಎಎಂ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ನಾವಿಕ ಮೃತಪಟ್ಟಿರುವುದಕ್ಕೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿರುವುದಾಗಿ ನೌಕಾಪಡೆಯ ವಕ್ತಾರರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.