ಚಂಡೀಗಢ: ಕೇಂದ್ರದಲ್ಲಿ ಎನ್ಡಿಎ ಬಲವನ್ನು ಪ್ರಶ್ನಿಸಿದ್ದ ವಿರೋಧ ಪಕ್ಷಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ, ನಮ್ಮ ಮೈತ್ರಿಕೂಟದ ಕೇಂದ್ರ ಸರ್ಕಾರವು ಐದು ವರ್ಷಗಳನ್ನು ಪೂರೈಸಲಿದೆ ಮತ್ತು 029ರಲ್ಲೂ ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

24 ಗಂಟೆ ನೀರು ಸರಬರಾಜು ಯೋಜನೆ ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ನಿಮಗೆ ನೀಡುವ ಭರವಸೆ ಏನೆಂದರೆ, ವಿರೋಧ ಪಕ್ಷಗಳು ಏನು ಹೇಳುತ್ತವೆಯೋ ಆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. 2029ರಲ್ಲೂ ಎನ್ಡಿಎ ಅಧಿಕಾರಕ್ಕೆ ಏರಲಿದೆ. ಮತ್ತೆ ನರೇಂದ್ರ ಮೋದಿಜೀ ಬರಲಿದ್ದಾರೆ’ಎಂದು ಹೇಳಿದ್ದಾರೆ.

‘ಕೆಲವು ಸ್ಥಾನಗಳನ್ನು ಗೆದ್ದು, ಚುನಾವಣೆಯಲ್ಲಿ ಯಶಸ್ಸು ಸಿಕ್ಕಿದೆ ಎಂದು ವಿಪಕ್ಷಗಳು ಭಾವಿಸಿವೆ. ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಒಟ್ಟು ಕಾಂಗ್ರೆಸ್ ಗೆದ್ದಿರುವ ಸ್ಥಾನಗಳಿಗಿಂತ ಹೆಚ್ಚನ್ನು ಬಿಜೆಪಿ 2024ರ ಚುನಾವಣೆಯಲ್ಲಿ ಗೆದ್ದಿದೆ. ಅಲ್ಲದೆ, ಇಂಡಿಯಾ ಬಣದ ಒಟ್ಟು ಸ್ಥಾನಗಳಿಗಿಂತ ಹೆಚ್ಚು ಸಂಖ್ಯೆಯನ್ನು ಎನ್ಡಿಎ ಬಣದ ಏಕೈಕ ಪಕ್ಷ ಬಿಜೆಪಿ ಹೊಂದಿದೆ ’ ಎಂದು ಕುಟುಕಿದ್ದಾರೆ.

ಅಲ್ಲದೆ, ಅನಿಶ್ಚಿತತೆ ಸೃಷ್ಟಿಸಲು ಯತ್ನಿಸುತ್ತಿರುವವರು, ಪದೇ ಪದೇ ಈ ಸರ್ಕಾರ ಉಳಿಯುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಶಾ ಕಿಡಿಕಾರಿದ್ದಾರೆ.

‘ಈ ಸರ್ಕಾರ ಐದು ವರ್ಷ ಪೂರ್ಣಗೊಳಿಸುವುದೂ ಅಲ್ಲದೆ, ಮುಂದಿನ ಅವಧಿಯಲ್ಲೂ ಅಧಿಕಾರಕ್ಕೆ ಬರಲಿದೆ ಎಂದು ವಿರೋಧ ಪಕ್ಷಗಳ ನನ್ನ ಸ್ನೇಹಿತರಿಗೆ ಭರವಸೆ ನೀಡಲು ಬಯಸುತ್ತೇನೆ. ವಿರೋಧ ಪಕ್ಷದಲ್ಲೇ ಕೂರಲು ಸಿದ್ಧವಾಗಿರಿ. ಪ್ರತಿಪಕ್ಷದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವತ್ತ ಚಿತ್ತ ಹರಿಸಿ’ಎಂದಿದ್ದಾರೆ.
.Wayanad Landslide: ದುರಂತದ ನೆಲದಲ್ಲಿ ಕಳ್ಳರ ಕಾಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.