ನವದೆಹಲಿ: ಲೇಖಕರಾದ ರುಡ್‌ಯಾರ್ಡ್ ಕಿಪ್ಲಿಂಗ್ ನಿಂದ ಓ ಹೆನ್ರಿವರೆಗೆ ಮತ್ತು ಆರ್.ಕೆ.ನಾರಾಯಣ್ ಅವರಿಂದ ಎನಿಡ್ ಬ್ಲೈಟನ್‌ವರೆಗೆ ಕಿರಿಯ ಮತ್ತು ಹಿರಿಯ ಮಕ್ಕಳಿಗಾಗಿ ರಚಿಸಿರುವ ಶ್ರೇಷ್ಠ ಕಥೆಗಳನ್ನೊಳಗೊಂಡ ಎರಡು ಬೃಹತ್ ಸಂಪುಟಗಳನ್ನು ಹ್ಯಾಚೆಟ್ ಇಂಡಿಯಾ ಪ್ರಕಾಶನ ಪ್ರಕಟಿಸಿದೆ.

ಪ್ರಕಾಶನ ಸಂಸ್ಥೆ, ‘100 ಗ್ರೇಟೆಸ್ಟ್ ಸ್ಟೋರೀಸ್ ಫಾರ್ ಯಂಗ್ ಚಿಲ್ಡ್ರನ್‘ ಮತ್ತು ‘50 ಗ್ರೇಟೆಸ್ಟ್ ಸ್ಟೋರಿಸ್ ಫಾರ್ ಓಲ್ಡ್ ಚಿಲ್ಡ್ರನ್‘ ಎಂಬ ಕಥಾ ಸಂಪುಟಗಳನ್ನು ಪ್ರಕಟಿಸಿದೆ. ಈ ಸಂಪುಟಗಳಲ್ಲಿ ಕಾಲ್ಪನಿಕ ಕಥೆಗಳು, ನೀತಿಕಥೆಗಳು, ಜಾನಪದ ಕಥೆಗಳು, ಭಾರತೀಯ ಮಹಾ ಕಾವ್ಯಗಳು ಮತ್ತು ಅಂತರರಾಷ್ಟ್ರೀಯ ಮತ್ತು ಭಾರತೀಯ ಲೇಖಕರು ಬರೆದ ಮಹಾಕಾವ್ಯ ಹಾಗೂ ಕಥೆಗಳಿವೆ.

ಈ ಎರಡು ಪುಸ್ತಕಗಳಿಗಾಗಿ ಆಸ್ಕರ್ ವೈಲ್ಡ್, ಬೀಟ್ರಿಕ್ಸ್ ಪಾಟರ್, ಚಾರ್ಲ್ಸ್ ಡಿಕನ್ಸ್, ಮಾರ್ಕ್ ಟ್ವೈನ್, ರವೀಂದ್ರನಾಥ ಟ್ಯಾಗೋರ್ ಮತ್ತು ಲಿಯೋ ಟಾಲ್‌ಸ್ಟಾಯ್ ಅವರಂತಹ ವಿಶ್ವದ ಅತ್ಯುತ್ತಮ ಮತ್ತು ಅತ್ಯಂತ ಪ್ರಿಯವಾದ ಲೇಖಕರು ಕಥೆಗಳನ್ನು ನೀಡಿದ್ದಾರೆ.

ಪ್ರತಿ ಸಂಪುಟದ ಬೆಲೆ ₹599. ಪ್ರಸ್ತುತ ಆನ್‌ಲೈನ್ ಮೂಲಕ ಪುಸ್ತಕಗಳು ಲಭ್ಯವಿದೆ. ಕೆಲವೊಂದು ಪುಸ್ತಕ ಮಳಿಗೆಗಳಲ್ಲೂ ಲಭ್ಯವಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.