ನವದೆಹಲಿ:ನಿರ್ಭಯಾ ಅತ್ಯಾಚಾರಿಗಳನ್ನು ಮಾರ್ಚ್ 3ರಂದುಬೆಳಗ್ಗೆ 6 ಗಂಟೆಗೆ ಗಲ್ಲಿಗೇರಿಸಬೇಕು ಎಂದು ದೆಹಲಿ ನ್ಯಾಯಾಲಯ ಸೋಮವಾರ ಹೊಸ ವಾರಂಟ್ ಜಾರಿ ಮಾಡಿದೆ.

ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಗೆಪರಿವರ್ತಿಸುವಂತೆ ಕೋರಿ ನಾಲ್ವರು ಅಪರಾಧಿಗಳ ಪೈಕಿವಿನಯ್ ರಾಷ್ಟ್ರಪತಿ ಮುಂದೆ ಕ್ಷಮಾದಾನ ಅರ್ಜಿ ಸಲ್ಲಿಸಿದ. ಬಳಿಕ ರಾಷ್ಟ್ರಪತಿಗಳು ಈ ಅರ್ಜಿಯನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ವಿನಯ್ ನ್ಯಾಯಾಲಯದ ಮೊರೆ ಹೋಗಿದ್ದ.

ಅಪರಾಧಿಗಳಾದ ಪವನ್ ಗುಪ್ತಾ (25), ವಿನಯ ಕುಮಾರ್ ಶರ್ಮಾ(26),ಅಕ್ಷಯ್ ಕುಮಾರ್(31) ಮತ್ತು ಮುಕೇಶ್ ಕುಮಾರ್ ಸಿಂಗ್‌ಗೆ (32)ಗಲ್ಲು ಶಿಕ್ಷೆಯನ್ನು ಎರಡು ಸಲ ಮುಂದೂಡಲಾಗಿತ್ತು. ಈ ಮೊದಲು ಜನವರಿ 22ರಂದು ಗಲ್ಲು ಶಿಕ್ಷೆ ವಿಧಿಸುವಂತೆ ‘ಡೆತ್ ವಾರಂಟ್’ ಜಾರಿಗೊಳಿಸಲಾಗಿತ್ತು. ಬಳಿಕ, ಫೆಬ್ರುವರಿ 1ಕ್ಕೆ ಮುಂದೂಡಲಾಗಿತ್ತು.

ಇದೀಗ ದೆಹಲಿ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆಮಾರ್ಚ್ 3ರಂದು ಗಲ್ಲಿಗೇರಿಸಬೇಕು ಎಂದು ಹೊಸ ವಾರೆಂಟ್ ಹೊರಡಿಸಿದೆ.

ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅಪರಾಧಿಗಳು ತಿಹಾರ್ ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.