ಕೋಲ್ಕತ್ತ: ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ಪಡೆಯಲು ನೆರವಾಗಲು ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಐಐಟಿ ದುರ್ಗಾಪುರ್ ಮುಂದಾಗಿದೆ.

ಈ ವರ್ಷ ಶಿಕ್ಷಣ ಕೋವಿಡ್ ಪರಿಸ್ಥಿತಿಯಿಂದಾಗಿ ಪೂರ್ಣವಾಗಿ ಆನ್ಲೈನ್ ಮೂಲಕವೇ ನಡೆಯಲಿದೆ. ಈ ಕುರಿತ ನಿರ್ಧಾರವನ್ನು ಶನಿವಾರ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆಯು ಹೇಳಿಕೆ ನೀಡಿದೆ.

ಅನೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದು, ಲ್ಯಾಪ್ಟಾಪ್ ಅಥವಾ ಸ್ಮಾರ್ಟ್ಫೋನ್ ಖರೀದಿಸಲು ಶಕ್ತರಲ್ಲ. ಎನ್ಐಟಿ ದುರ್ಗಾಪುರ್ ಇಂಥ ಅಗತ್ಯ ವಿದ್ಯಾರ್ಥಿಗಳಿಗೆ ನೆರವಾಗಲು ಸಾಧ್ಯವಾದಷ್ಟು ಕ್ರಮವಹಿಸುತ್ತಿದೆ. ಶಿಕ್ಷಣ ಮುಂದುವರಿಸಲು ನೆರವಾಗುವಂತೆ ಶುಲ್ಕ ಭರಿಸುವ ಕುರಿತೂ ಚಿಂತನೆ ನಡೆದಿದೆ. ಕೋವಿಡ್ ಸ್ಥಿತಿಯಿಂದಾಗಿ ಇದು ಅಗತ್ಯ ಎಂದು ತಿಳಿಸಿದೆ.

ಸಂಸ್ಥೆಯು ಸದ್ಯ ನಿಧಿ ಸಂಗ್ರಹಿಸುತ್ತಿದೆ. ಹಿರಿಯ ವಿದ್ಯಾರ್ಥಿಗಳು ಈ ಉದ್ದೇಶಕ್ಕಾಗಿ ನೆರವಾಗಲು ಮುಂದೆ ಬರಬೇಕು. ಸಂಸ್ಥೆಗಳು ತಮ್ಮ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದಲೂ ನೆರರವಾಗಬಹುದು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.