ರಾಮಗಢ(ಬಿಹಾರ): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಒಬ್ಬ ನಾಚಿಕೆ ಇಲ್ಲದ ವ್ಯಕ್ತಿ, ಮುಸ್ಲಿಮರ ಬೆನ್ನಿಗೆ ಇರಿದಿದ್ದಾರೆ ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಕಿಡಿಕಾರಿದ್ದಾರೆ.

4 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದಲ್ಲಿ ನಿತೀಶ್ ಅಲ್ಪಸಂಖ್ಯಾತ ಸಮುದಾಯದ ಓಲೈಕೆಗೆ ಮುಂದಾಗಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಿಜ, ಬೆನ್ನಿಗೆ ಚೂರಿಯಿಂದ ಇರಿಯುವ ಮೂಲಕ ಮುಸ್ಲಿಮರಿಗಾಗಿ ಅವರು ಬಹಳಷ್ಟನ್ನು ಮಾಡಿದ್ದಾರೆ ಎಂದು ಪ್ರಚಾರದ ವೇಳೆ ಪ್ರಶಾಂತ್ ವ್ಯಂಗ್ಯ ಮಾಡಿದ್ದಾರೆ.

2015ರಲ್ಲಿ ಮುಸ್ಲಿಮರ ಅಭೂತಪೂರ್ವ ಬೆಂಬಲ ಪಡೆದು ಗೆದ್ದ ನಿತೀಶ್, ಎರಡು ವರ್ಷಗಳ ಬಳಿಕ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು ಎಂದು ದೂರಿದ್ದಾರೆ. ಅಲ್ಲದೆ, ಮುಸ್ಲಿಮರ ವಿರುದ್ಧವಾದ ಕಾನೂನುಗಳನ್ನು ಬೆಂಬಲಿಸಿದ್ದಾರೆ ಎಂದು ದೂರಿದ್ದಾರೆ.

ನಿತೀಶ್ ಕುಮಾರ್ ಒಬ್ಬ ನಾಚಿಕೆ ಇಲ್ಲದ ವ್ಯಕ್ತಿಯಾಗಿದ್ದು, ಅವರ ಬಗ್ಗೆ ಜನರಿಗೆ ಅಸಹ್ಯ ಉಂಟಾಗಿದೆ. ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಹಾತೊರೆಯುತ್ತಿದ್ದಾರೆ ಎಂದಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ಬಟೆಂಗೆ ಥೋ ಕಟೆಂಗೆ’ಘೋಷವಾಕ್ಯದ ಬಗ್ಗೆ ಪ್ರತಿಕ್ರಿಯಿಸಿದ ಪ್ರಶಾಂತ್, ಇದು ಹಿಂದೂಗಳಲ್ಲಿ ಅಸುರಕ್ಷಿತ ಭಾವನೆ ಮೂಡಿಸುವ ಮತ್ತು ಚುನಾವಣಾ ಲಾಭ ಮಾಡಿಕೊಳ್ಳುವ ಬಿಜೆಪಿಯ ಹಳೆ ಕಾರ್ಯತಂತ್ರ. ಮೋದಿ ಪ್ರಧಾನಿ ಆದಾಗಿನಿಂದ ಬಿಹಾರದಲ್ಲಿ ಎಷ್ಟು ಕಾರ್ಖಾನೆ ಸ್ಥಾಪಿಸಿದ್ದಾರೆ ಎಂದು ಬಿಜೆಪಿ ಜನರಿಗೆ ಹೇಳಲಿ ಎಂದು ಗುಡುಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.