ನವದೆಹಲಿ: ‘ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಪ್ರದಾನ ಸಮಾರಂಭ ಮಾರ್ಚ್ 30ರಂದು ನಡೆಯಲಿದೆ. ಹೀಗಾಗಿ ಆ ದಿನ ನಡೆಯಬೇಕಿದ್ದ ಅಂಗರಕ್ಷಕರ ಬದಲಾವಣೆಗಾಗಿ ಆಯೋಜಿಸುವ ಕಾರ್ಯಕ್ರಮ ನಡೆಯದು’ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

ರಾಷ್ಟ್ರಪತಿಯ ಅಂಗರಕ್ಷಕರು ಪ್ರತಿ ವಾರ ಬದಲಾಗುತ್ತಾರೆ. ಹೀಗೆ ಅಂಗರಕ್ಷಕರ ಬದಲಾವಣೆ ಕಾರ್ಯಕ್ರಮವನ್ನು ಸೇನಾ ಪರಂಪರೆಯ ಭಾಗವಾಗಿ ಇಂದಿಗೂ ಆಯೋಜಿಸಲಾಗುತ್ತದೆ.

‘ಅಂಗರಕ್ಷಕರ ಬದಲಾವಣೆ ಕಾರ್ಯಕ್ರಮ ಮಾರ್ಚ್ 30ರಂದು ಶನಿವಾರ ರಾಷ್ಟ್ರಪತಿ ಭವನದಲ್ಲಿ ನಡೆಯಬೇಕಿತ್ತು. ಆದರೆ ಅದೇ ದಿನ ಭಾರತ ರತ್ನ ಪ್ರದಾನ ಕಾರ್ಯಕ್ರಮ ಆಯೋಜನೆಗೊಂಡಿರುವುದರಿಂದ ಅಂಗರಕ್ಷಕರ ಬದಲಾವಣೆಗಾಗಿ ಆಯೋಜಿಸುವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಹಾಗೂ ಮರಣೋತ್ತರವಾಗಿ ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಹಾಗೂ ಪಿ.ವಿ.ನರಸಿಂಹ ರಾವ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಕೃಷಿ ವಿಜ್ಞಾನಿ ಡಾ. ಎಂ.ಎಸ್.ಸ್ವಾಮಿನಾಥನ್ ಅವರಿಗೆ ಮಾರ್ಚ್ 30ರಂದು ಭಾರತ ರತ್ನ ಪ್ರದಾನ ಮಾಡಲಾಗುತ್ತಿದೆ.
.ಸ್ವಾಮಿನಾಥನ್ ವರದಿ ಜಾರಿಗೊಳಿಸದೆ ಭಾರತ ರತ್ನ ನೀಡುವುದು ಸರಿಯಲ್ಲ: ನಾಗಮೋಹನದಾಸ್.ಪಿ.ವಿ. ನರಸಿಂಹ ರಾವ್ ಅವರಿಗೆ ಭಾರತ ರತ್ನ: ಸ್ವಾಗತಿಸಿದ ಸೋನಿಯಾ ಗಾಂಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.