ಅಹಮದಾಬಾದ್: ‘ಕಾಂಗ್ರೆಸ್ ಪಕ್ಷದಲ್ಲಿದ್ದು ಬದುಕಿನ ಮೂರು ವರ್ಷಗಳು ವ್ಯರ್ಥವಾದುವು. ಬಿಜೆಪಿ, ಎಎಪಿ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಕುರಿತು ಇದುವರೆಗೆ ನಿರ್ಧರಿಸಿಲ್ಲ’ ಎಂದು ಕಾಂಗ್ರೆಸ್ ತೊರೆದಿರುವ ಪಾಟೀದಾರ್ ಮೀಸಲಾತಿ ಪರ ಹೋರಾಟಗಾರ ಹಾರ್ದಿಕ್ ಪಟೇಲ್ ಗುರುವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ ಪ್ರಕರಣದಲ್ಲಿ ಬಿಜೆಪಿಯ ಪ್ರಯತ್ನವನ್ನು ಹಾಗೂ 370ನೇ ಕಲಂ ರದ್ದು ಮಾಡಿರುವುದನ್ನು ಪ್ರಶಂಸಿಸಿದರು. ಕಾಂಗ್ರೆಸ್ನ ‘ಮನ್ನೋಟ’ ಇಲ್ಲದ ನಾಯಕರು ಗುಜರಾತ್ನ ಜನರ ವಿರುದ್ಧ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಜನರ ಹಿತದೃಷ್ಟಿಗೆ ಅನುಗುಣವಾಗಿರುತ್ತದೆ ಎಂದೂ ಅವರು ತಿಳಿಸಿದ್ದಾರೆ. ಹಾರ್ದಿಕ್ ಅವರು ಕಾಂಗ್ರೆಸ್ಗೆ ಬುಧವಾರ ರಾಜೀನಾಮೆ ನೀಡಿದ್ದರು.

ಕಾಂಗ್ರೆಸ್ ತೊರೆದ ಪಾಟಿದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.