ನವದೆಹಲಿ: ‘ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕದ ಸಂಗ್ರಹ ಇದೆ. ಹೀಗಾಗಿ, ಯಾವುದೇ ರೀತಿಯ ಆತಂಕ ಬೇಡ’ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ತಿಳಿಸಿದೆ.

‘ಆದರೆ, ವಿವಿಧ ರಾಜ್ಯಗಳಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ಅತ್ಯಧಿಕ ಬೇಡಿಕೆ ಇರುವ ರಾಜ್ಯಗಳಿಗೆ ಸಾಗಿಸಲು ಸಮಸ್ಯೆಯಾಗುತ್ತಿದೆ. ಸರ್ಕಾರ ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಯತ್ನಿಸುತ್ತಿದೆ’ ಎಂದು ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

‘ಈ ಮೊದಲು ಆಮ್ಲಜನಕ ಕೊಂಡೊಯ್ಯುವ ಟ್ಯಾಂಕರ್ಗಳು ಒಟ್ಟಾರೆಯಾಗಿ 4ರಿಂದ 5 ದಿನಗಳ ಸಮಯವನ್ನು ತೆಗೆದುಕೊಳ್ಳುತ್ತಿದ್ದವು. ಈಗ ಅದನ್ನು ಒಂದರಿಂದ ಎರಡು ಗಂಟೆಗೆ ಇಳಿಸಲಾಗಿದೆ. ಇದಕ್ಕಾಗಿ, ಭಾರತೀಯ ವಾಯು ಪಡೆಯ ನೆರವು ಪಡೆಯಲಾಗಿದೆ. ಖಾಲಿ ಟ್ಯಾಂಕರ್ಗಳನ್ನು ವಿಮಾನಗಳ ಮೂಲಕ ಸಾಗಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 14 ದಿನ ಕೋವಿಡ್ ಕರ್ಫ್ಯೂ: ಏನಿರುತ್ತೆ... ಏನಿರಲ್ಲ?

‘ಆಮ್ಲಜನಕ ಕೊಂಡೊಯ್ಯುವ ಟ್ಯಾಂಕರ್ಗಳ ಸಂಚಾರದ ಬಗ್ಗೆ ಕೇಂದ್ರ ಸರ್ಕಾರ ಜಿಪಿಎಸ್ ಮೂಲಕ ನಿರಂತರವಾಗಿ ನಿಗಾವಹಿಸಿದೆ. ಅತಿ ಕಡಿಮೆ ಅವಧಿಯಲ್ಲಿ ಆಸ್ಪತ್ರೆಗಳಿಗೆ ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಹರಿಯಾಣದಲ್ಲಿ ಕೋವಿಡ್ ರೋಗಿಗಳ ಸಾವು: ಆಮ್ಲಜನಕ ಕೊರತೆಯ ಆರೋಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.