ನವದೆಹಲಿ: ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವುದಕ್ಕೆ ಸಂಬಂಧಿಸಿದ ‘ಸಂಸದರ ವಿವೇಚನಾ ಕೋಟಾ’ವನ್ನು ರದ್ದುಪಡಿಸಿರುವ ಆದೇಶವನ್ನು ಪುನರ್ ಪರಿಶೀಲಿಸುವ ಪ್ರಸ್ತಾವ ಇಲ್ಲ ಎಂದು ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವೆ ಅನ್ನಪೂರ್ಣ ದೇವಿ ತಿಳಿಸಿದ್ದಾರೆ.

ದೇಶಾದಾದ್ಯಂತ ಶಿಕ್ಷಣದ ಸಾಮಾನ್ಯ ಕಾರ್ಯಕ್ರಮ ಒದಗಿಸುವ ಮೂಲಕ ರಕ್ಷಣಾ ಮತ್ತು ಅರೆ ಮಿಲಿಟರಿ ಸಿಬ್ಬಂದಿ, ಕೇಂದ್ರ ಸ್ವಾಯತ್ತ ಸಂಸ್ಥೆಗಳು, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ (ಐಎಚ್ಎಲ್) ಸೇರಿದಂತೆ ವರ್ಗಾವಣೆ ಮಾಡಬಹುದಾದ ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಶೈಕ್ಷಣಿಕ ಅಗತ್ಯ ಪೂರೈಸಲು ಕೇಂದ್ರೀಯ ವಿದ್ಯಾಲಯ ತೆರೆಯಲಾಗಿದೆ.

‘ಸಂಸದರ ವಿವೇಚನಾ ಕೋಟಾ ಸೇರಿದಂತೆ ಕೆಲ ವಿಶೇಷ ನಿಬಂಧನೆಗಳ ಅಡಿ ಪ್ರವೇಶವನ್ನು ಪ್ರತಿ ವಿಭಾಗಕ್ಕೆ ಮಂಜೂರಾದ ವಿದ್ಯಾರ್ಥಿಗಳ ಸಂಖ್ಯೆ 40ಕ್ಕಿಂತ ಹೆಚ್ಚು ನೀಡಿರುವುದರಿಂದ ಅಂತಹ ಯಾವುದೇ ಪ್ರಸ್ತಾವ ಇಲ್ಲ. ಇದು ತರಗತಿಗಳಲ್ಲಿ ಹೆಚ್ಚಿನ ವಿದ್ಯಾರ್ಥಿ, ಶಿಕ್ಷಕರ ಅನುಪಾತದಿಂದಾಗಿ ಕಲಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದು ಅವರು ಹೇಳಿದ್ದಾರೆ.

ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ಸಂಸದರು ಸೇರಿದಂತೆ ಹಲವಾರು ವಿವೇಚನಾ ಕೋಟಾಗಳನ್ನು ಕೇಂದ್ರ ಸರ್ಕಾರ ಕಳೆದ ವರ್ಷ ರದ್ದುಗೊಳಿಸಿತ್ತು.

ದೇಶದಲ್ಲಿ 1,200ಕ್ಕೂ ಹೆಚ್ಚು ಕೇಂದ್ರೀಯ ವಿದ್ಯಾಲಯಗಳಿದ್ದು, 14.35 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 245 ಸಂಸದರು ಒಟ್ಟಾಗಿ ಕೋಟಾದಡಿ ವರ್ಷಕ್ಕೆ 7,880 ಪ್ರವೇಶಗಳನ್ನು ಶಿಫಾರಸು ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.