ನೊಯ್ಡಾ: ನೋಯ್ಡಾದಲ್ಲಿ ಸೂಪರ್‌ಟೆಕ್ ಸಂಸ್ಥೆಯು ಅಕ್ರಮವಾಗಿ ನಿರ್ಮಿಸಿದ ಅವಳಿ ಗೋಪುರಗಳನ್ನು ಸ್ಫೋಟಕಗಳೊಂದಿಗೆ ನೆಲಸಮ ಮಾಡುವ ಪ್ರಕ್ರಿಯೆ ಶನಿವಾರ ಪ್ರಾರಂಭವಾಗಿದ್ದು, ಸುಮಾರು 100 ಮೀಟರ್ ವ್ಯಾಪ್ತಿಯ ಎಲ್ಲಾ ರಚನೆಗಳನ್ನು ಆಗಸ್ಟ್ 28 ರಂದು ಕೆಡವಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅವಳಿ ಗೋಪುರಗಳ ಕಟ್ಟಡಗಳಲ್ಲಿ ಸುಮಾರು 9,400 ರಂಧ್ರಗಳನ್ನು ಕೊರೆಯಲಾಗಿದ್ದು, 3,500 ಕೆಜಿಗಿಂತ ಹೆಚ್ಚು ಸ್ಫೋಟಕ ತುಂಬಿಸಿ, ನೆಲಸಮ ಮಾಡಲಾಗುತ್ತದೆ. ಮೊದಲ ಗುಂಪಿನ ಸ್ಫೋಟಕಗಳು ನೋಯ್ಡಾದ ಸೆಕ್ಟರ್ 93 ‘ಎ’ನಲ್ಲಿರುವ ಸ್ಥಳಕ್ಕೆ, ಬಿಗಿ ಪೊಲೀಸ್ ಭದ್ರತೆಯೊಂದಿಗೆ ಶನಿವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ತಲುಪಿದವು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಪುರಗಳ ನೆಲಸಮ ಪ್ರಕ್ರಿಯೆ ಸುಮಾರು 15 ದಿನ ತೆಗೆದುಕೊಳ್ಳುತ್ತದೆ ಎಂದದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.