ಜಗತ್ಸಿಂಗ್ಪುರ (ಒಡಿಶಾ) (ಪಿಟಿಐ):ಆಂಬುಲೆನ್ಸ್ ಚಾಲಕನೊಬ್ಬ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ವಾಹನವನ್ನು ನಿಲ್ಲಿಸಿ ಮದ್ಯ ಸೇವೆಸಿ, ರೋಗಿಗೂ ಕುಡಿಸಿರುವ ಘಟನೆ ಇಲ್ಲಿನ ತಿರ್ತೌಲ್ಪ್ರದೇಶದಲ್ಲಿ ನಡೆದಿದೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ಚಾಲಕನ ಜೊತೆಗೆ ರೋಗಿಯೂ ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಮದ್ಯವನ್ನು ಸೇವಿಸುತ್ತಿರುವ ದೃಶ್ಯವಿದೆ.

ಪ್ರತ್ಯಕ್ಷದರ್ಶಿಗಳು ಚಾಲಕನನ್ನು ಪ್ರಶ್ನಿಸಿದಾಗ, ರೋಗಿಯೇ ಮದ್ಯವನ್ನು ಕೇಳಿದ್ದಾಗಿ ತಿಳಿಸಿದ್ದಾರೆ.

‘ಇದು ಖಾಸಗಿ ಆಂಬುಲೆನ್ಸ್, ಹೀಗಾಗಿ ನಾವು ಹೆಚ್ಚೇನೂ ಹೇಳಲು ಸಾಧ್ಯವಿಲ್ಲ. ಆದರೆ ಆರ್ಟಿಒ ಮತ್ತು ಪೊಲೀಸ್ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಜಗತ್ಸಿಂಗ್ಪುರ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ.ಕ್ಷೇತ್ರಬಾಸಿ ದಾಶ್ ಅವರು ತಿಳಿಸಿದ್ದಾರೆ.

‘ಔಪಚಾರಿಕಚಾಗಿ ದೂರು ದಾಖಲಾಗಿಲ್ಲ, ಎಫ್ಐಆರ್ ದಾಖಲಾದಲ್ಲಿ ತನಿಖೆ ನಡೆಸುತ್ತೇವೆ’ ಎಂದು ತಿರ್ತೌಲ್ ಪೊಲೀಸ್ ಠಾಣೆ ಉಸ್ತುವಾರಿ, ಇನ್ಸ್ಪೆಕ್ಟರ್ ಜುಗಲ್ ಕಿಶೋರ್ ದಾಸ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.