ಕೋಯಿಕ್ಕೋಡ್/ತಿರುವನಂತಪುರ: ಕೇರಳದಲ್ಲಿ ನಿಪಾ ವೈರಾಣುವಿನ ಐದನೇ ಪ್ರಕರಣ ದೃಢಪಟ್ಟಿದೆ. ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಆರೋಗ್ಯ ಕಾರ್ಯಕರ್ತರಿಗೆ ನಿಪಾ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತೀವ್ರ ನಿಗಾ ಘಟಕದಲ್ಲಿರುವ ಸೋಂಕಿತ ಒಂಬತ್ತು ವರ್ಷದ ಬಾಲಕನ ಪರಿಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
.NiPah Alert: ಕೇರಳದಲ್ಲಿ ಅಸಹಜವಾಗಿ ಮೃತಪಟ್ಟ ಇಬ್ಬರಲ್ಲೂ ನಿಪಾ ವೈರಸ್ ಪತ್ತೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ (ಐಸಿಎಂಆರ್) ಮಾತ್ರ ಲಭ್ಯವಿರುವ ನಿಪಾ ಸೋಂಕಿನಿಂದ ರಕ್ಷಣೆ ನೀಡಬಲ್ಲ ಮೊನೊಕ್ಲೋನಲ್ ಪ್ರತಿಕಾಯ ತುರ್ತಾಗಿ ತರಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರೋಗಿಯೊಂದಿಗೆ ನಿಕಟ ಸಂಪರ್ಕ ಹೊಂದಿದ ಶಂಕೆ ಹಿನ್ನೆಲೆಯಲ್ಲಿ 76 ಮಂದಿ 'ಹೈ ರಿಸ್ಕ್' ವಿಭಾಗದಲ್ಲಿದ್ದು, ಈ ಪೈಕಿ 13 ಮಂದಿಯಲ್ಲಿ ಸೌಮ್ಯ ರೋಗಲಕ್ಷಣ ಕಂಡುಬಂದಿದೆ. ಅವರೆಲ್ಲರೂ ಪ್ರತ್ಯೇಕ ವಾಸದಲ್ಲಿದ್ದು, ನಿಗಾ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಸೆಪ್ಟೆಂಬರ್ 24ರ ವರೆಗೆ ಕೋಯಿಕ್ಕೋಡ್‌ನಲ್ಲಿ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ.

ಕೇರಳದಲ್ಲಿ ನಿಪಾ ವೈರಸ್‌ನ ಬಾಂಗ್ಲಾದೇಶಿ ಉಪತಳಿ ಪತ್ತೆಯಾಗಿದ್ದು, ಇದು ಮಾನವರಿಂದ ಮಾನವರಿಗೆ ಹರಡುತ್ತದೆ. ಈ ಸೋಂಕಿಗೆ ಒಳಗಾದವರ ಸಾವಿನ ಪ್ರಮಾಣ ಹೆಚ್ಚೇ ಇರುತ್ತದೆ. ಆದರೆ ಇದರ ಸೋಂಕು ಪ್ರಸರಣ ದರ ಕಡಿಮೆ ಇರುತ್ತದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.