ಲಖನೌ: ಬುಲಂದ್‌ಶಹರ್ ಜಿಲ್ಲೆಯಲ್ಲಿ ಪೊಲೀಸರನ್ನು ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಹಸಿರಾಗಿರುವಾಗಲೇ, ಗಾಜೀಪುರ ಜಿಲ್ಲೆಯಲ್ಲಿ ಮತ್ತೊಬ್ಬ ಪೊಲೀಸ್ ಕಾನ್‌ಸ್ಟೆಬಲ್‌ರನ್ನು ಗುಂಪೊಂದು ಹತ್ಯೆ ಮಾಡಿದೆ.

ಗಾಜೀಪುರದಿಂದ 350 ಕಿ.ಮೀ. ದೂರದಲ್ಲಿರುವ ಕಥವಾ ಎಂಬಲ್ಲಿ ಧರಣಿ ಮಾಡುತ್ತಿದ್ದ ಗುಂಪು ನಡೆಸಿದ ಕಲ್ಲು ತೂರಾಟದಲ್ಲಿ ಸುರೇಶ್ ವತ್ಸ್ ಎಂಬ ಕಾನ್‌ಸ್ಟೆಬಲ್ ಸಾವಿಗೀಡಾಗಿದ್ದಾರೆ.

ಗಾಜೀಪುರ ಪಟ್ಟಣದಲ್ಲಿ ನರೇಂದ್ರಮೋದಿಯವರ ಸಾರ್ವಜನಿಕ ಸಭೆಯಿಂದ ಹಿಂದಿರುಗುತ್ತಿದ್ದ ಪೊಲೀಸ್ ವಾಹನದ ಮೇಲೆ ‘ನಿಷಾದ್’ (ಅಂಬಿಗ) ಸಮುದಾಯದ ಜನ ಕಲ್ಲು ತೂರಿದ್ದಾರೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.

ಮೀಸಲಾತಿ ನೀಡಲು ಆಗ್ರಹಿಸಿ ಈ ಸಮುದಾಯದವರು ಧರಣಿ ನಡೆಸುತ್ತಿದ್ದರು. ಘಟನೆ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.