ನವದೆಹಲಿ: ಪ್ರಶ್ನೆ ಕೇಳಲು ಹಣ ಪಡೆದ ಆರೋಪ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲು ಶಿಫಾರಸು ಮಾಡಿದ ಲೋಕಸಭೆಯ ನೀತಿ ಸಮಿತಿಯ ವರದಿಯ ವಿರುದ್ಧ ಐವರು ವಿರೋಧ ಪಕ್ಷದ ಸಂಸದರು ಗುರುವಾರ ಭಿನ್ನ ಅಭಿಪ್ರಾಯಗಳನ್ನು ಸಲ್ಲಿಸಿದ್ದಾರೆ. ಆದರೆ, ಸಮಿತಿ ನಿರ್ಧಾರದಲ್ಲಿ ಯಾವುದೇ ನೀತಿ ಇಲ್ಲ. ಎಲ್ಲವೂ ಸೇಡಿನ ರಾಜಕೀಯವಾಗಿದೆ ಎಂದೂ ಅವರು ಹೇಳಿದ್ದಾರೆ.

ತನಿಖಾ ಪ್ರಕ್ರಿಯೆಯು ಕೇವಲ ಒಂದು ಪ್ರಹಸನ. ಇದು ಕಾಂಗರೂ ನ್ಯಾಯಾಲಯ ಎಂದು ವಿರೋಧ ಪಕ್ಷಗಳ ಸಂಸದರು ತಮ್ಮ ಭಿನ್ನಾಭಿಪ್ರಾಯ ಟಿಪ್ಪಣಿಗಳಲ್ಲಿ ಪ್ರತಿಪಾದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸದರ ವಿರುದ್ಧ ದ್ವೇಷದಿಂದ ಇಬ್ಬರು ವ್ಯಕ್ತಿಗಳು ಸಲ್ಲಿಸಿದ ದೂರಿಗೆ ಯಾವುದೇ ಕಿಮ್ಮತ್ತು ಇಲ್ಲ, ಅದು ಆಧಾರರಹಿತ. ಮಹಿಳಾ ಸಂಸದೆಯ ಮಾನಹಾನಿ ಮಾಡಲು ಇದನ್ನು ಬಳಸಲಾಗುತ್ತಿದೆ ಎಂದು ಸಂಸದರು ಹೇಳಿದ್ದಾರೆ.

ಸಭೆಯಲ್ಲಿ ಉಪಸ್ಥಿತರಿದ್ದ ಸಂಸದರಾದ ಪಿ.ಆರ್. ನಟರಾಜನ್(ಸಿಪಿಐಎಂ), ಡ್ಯಾನಿಶ್ ಅಲಿ(ಬಿಎಸ್‌ಪಿ), ವಿ ವೈತಿಲಿಂಗಂ(ಕಾಂಗ್ರೆಸ್) ಮತ್ತು ಗಿರ್ಧಾರಿ ಯಾದವ್(ಜೆಡಿಯು) ತಮ್ಮ ಭಿನ್ನಾಭಿಪ್ರಾಯವನ್ನು ವೈಯಕ್ತಿಕವಾಗಿ ಸಲ್ಲಿಸಿದ್ದಾರೆ. ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ತೆಲಂಗಾಣದಲ್ಲಿ ಇದ್ದುದರಿಂದ ಸಭೆಗೆ ಹಾಜರಾಗಲು ಸಾಧ್ಯವಾಗದ ರೆಡ್ಡಿ ಅವರು ತಮ್ಮ ಅಸಮ್ಮತಿ ಪತ್ರವನ್ನು ಇಮೇಲ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿಪಕ್ಷದ ಸಂಸದರ ಟಿಪ್ಪಣಿಗಳು ಬಹುತೇಕ ಒಂದೇ ರೀತಿಯಲ್ಲಿದ್ದು, ತಮ್ಮ ಬಲವಾದ ಭಿನ್ನಾಭಿಪ್ರಾಯವನ್ನು ವರದಿಗೆ ಮಾತ್ರವಲ್ಲದೆ ಸಮಿತಿಯ ಸಂಪೂರ್ಣ ಕಾನೂನುಬಾಹಿರ ನಡವಳಿಕೆ ಮತ್ತು ಕಾರ್ಯನಿರ್ವಹಣೆ ಬಗ್ಗೆ ಇತ್ತು.

ಪ್ರತಿಪಕ್ಷದ ಸದಸ್ಯರಲ್ಲಿ ಒಬ್ಬರು, ಸಮಿತಿಯ ನಿರ್ಣಯಗಳು ಆತುರ ಮತ್ತು ಕಾನೂನು ಬಾಹಿರವಾಗಿದೆ ಎಂದಿದ್ಧಾರೆ.

ನೀತಿ ಸಮಿತಿಗೆ ನೀಡಿದ ದೂರು ಸುಳ್ಳು, ಕ್ಷುಲ್ಲಕ, ವಿಷಾದಕರವಾಗಿರಬಾರದು. ಇದು ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ. ಬೇರೆ ಎಲ್ಲ ರೀತಿಯ ಕಿರುಕುಳಕ್ಕೆ ಸಂಸದರನ್ನು ಉಚ್ಚಾಟಿಸಲು ಕೋರಲಾಗುತ್ತದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.
.ಸದನದಿಂದ ಮಹುವಾ ಉಚ್ಚಾಟನೆಗೆ ನೀತಿ ಸಮಿತಿ ಶಿಫಾರಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.