ನವದೆಹಲಿ: ಸಂವಿಧಾನದ 370 ನೇ ವಿಧಿ ರದ್ದು ಮಾಡಿದ ನಂತರ ಕಾಶ್ಮೀರದ ಬಗ್ಗೆ ಪ್ರಚೋದನಾಕಾರಿ ಬರಹ ಪ್ರಕಟಿಸಿದ 333 ಟ್ವಿಟರ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.

ಇದನ್ನೂ ಓದಿ:ಜಮ್ಮು–ಕಾಶ್ಮೀರದ ಬಗ್ಗೆ ನಕಲಿ ಸುದ್ದಿಗಳ ಪ್ರಚಾರ: ಎಚ್ಚರಿಕೆ

ಈ ಖಾತೆಗಳಲ್ಲಿ ಪ್ರಕಟವಾದ ಬರಹ ಸತ್ಯಕ್ಕೆ ದೂರವಾದುದು ಎಂದು ಭಾರತೀಯರು ಆಕ್ಷೇಪ ವ್ಯಕ್ತ ಪಡಿಸಿದ್ದರಿಂದ ಖಾತೆಯನ್ನು ಟ್ವಿಟರ್ ಸ್ಥಗಿತಗೊಳಿಸಿತ್ತು.

ಖಾತೆಗಳನ್ನು ನಿರ್ಬಂಧಿಸಿರುವ ಬಗ್ಗೆ ಮತ್ತು ಟ್ವೀಟ್ ಸ್ಥಗಿತ ಗೊಳಿಸಿರುವ ಬಗ್ಗೆ ಪಾಕಿಸ್ತಾನ್ ಟೆಲಿಕಮ್ಯುನಿಕೇಷವ್ ಅಥಾರಿಟಿ (ಪಿಟಿಎ), ಟ್ವಿಟರ್ ಸಂಸ್ಥೆಯನ್ನು ಪ್ರಶ್ನಿಸಿರುವುದಾಗಿ ಡಾನ್ ಬುಧವಾರ ವರದಿ ಮಾಡಿದೆ.

ಟ್ವಿಟರ್ ಸಂಸ್ಥೆಯ ನಿಲುವು ಏಕ ಪಕ್ಷೀಯವಾಗಿದೆ ಎಂದು ಪಿಟಿಎ ಹೇಳಿದೆ. ಕಾಶ್ಮೀರ ವಿಷಯಕ್ಕೆ ಸಂಬಂಧಪಟ್ಟ ಬರಹ ಪೋಸ್ಟಿಸುವ ಟ್ವಿಟರ್ ಖಾತೆಗಳನ್ನು ರಿಪೋರ್ಟ್ ಮಾಡಿ ಎಂದು ಟ್ವಿಟರ್ ಸಂಸ್ಥೆ ಪಾಕಿಸ್ತಾನದ ಟ್ವೀಟಿಗರಲ್ಲಿ ಮನವಿ ಮಾಡಿದೆ.

ಇದನ್ನೂ ಓದಿ:ಕಾಶ್ಮೀರ ಸ್ತಬ್ಧಗೊಳಿಸಲು ಉಗ್ರರ ಪ್ರಯತ್ನ

ಪಿಟಿಎಗೆ ಈ ರೀತಿಯ 333 ದೂರುಗಳು ಲಭಿಸಿದ್ದು, ಇದನ್ನು ಟ್ವಿಟರ್ಗೆ ಕಳಿಸಿಕೊಡಲಾಗಿದೆ. ಇದರಲ್ಲಿ 67 ಖಾತೆಗಳನ್ನು ಪುನಃ ಸ್ಥಾಪಿಸಲಾಗಿದೆ ಎಂದು ಡಾನ್ ವರದಿ ಮಾಡಿದೆ.

ಟ್ವಿಟರ್ ಈ ಖಾತೆಗಳನ್ನು ನಿರ್ಬಂಧಿಸುವುದಕ್ಕಿರುವ ಕಾರಣ ಅಥವಾ ಅಧಿಕೃತವಾಗಿ ಪ್ರತಿಕ್ರಿಯೆ ನೀಡುವುದಾಗಲೀ ಮಾಡಿಲ್ಲ ಎಂದು ಪಿಟಿಎ ಹೇಳಿದೆ.

ಪಾಕಿಸ್ತಾನದ ಟ್ವೀಟಿಗರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇರುವ ಸ್ವಾತಂತ್ರ್ಯ ನೀಡುವುದರ ಬಗ್ಗೆ ಪ್ರಯತ್ನ ಪಡುತ್ತಿದ್ದೇವೆ.ಪಾಕಿಸ್ತಾನದಲ್ಲಿ ಅಥವಾ ಟ್ವಿಟರ್ ಅಧಿಕಾರಿಗಳು ಹೇಳುವ ಜಾಗಕ್ಕೆ ಬಂದು ಅರ್ಥಪೂರ್ಣ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದರೂ ಟ್ವಿಟರ್ ಪ್ರತಿಕ್ರಿಯಿಸಿಲ್ಲ ಎಂದು ಪಿಟಿಎ ಹೇಳಿದೆ.

ಕಾಶ್ಮೀರ ಬಗ್ಗೆ ಟ್ವೀಟ್ ಮಾಡಿದ ಸುಮಾರಿ 200 ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಾನ್ ಆಗಸ್ಟ್ನಲ್ಲಿ ವರದಿ ಪ್ರಕಟಿಸಿತ್ತು.

ಇದನ್ನೂ ಓದಿ:ಕಾಶ್ಮೀರ ವಿಚಾರದಲ್ಲಿ ಅಮೆರಿಕ ಧೈರ್ಯದಿಂದ ಮಾತನಾಡಲಿ: ಬರ್ನಿ ಸ್ಯಾಂಡರ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.