ನವದೆಹಲಿ: ಸುಳ್ಳುಗಳನ್ನು ಹಬ್ಬಿಸುವುದಕ್ಕಾಗಿ ಪಾಕಿಸ್ತಾನ ವಿವಿಧ ರಾಯಭಾರ ಕಚೇರಿಗಳಲ್ಲಿ ಕಾಶ್ಮೀರ್ ಡೆಸ್ಕ್ ಆರಂಭಿಸಿದ್ದು ಇದಕ್ಕೆ ಭಾರತ ಆಕ್ಷೇಪ ವ್ಯಕ್ತ ಪಡಿಸಿದೆ. ರಾಯಭಾರ ಕಚೇರಿಗಳಲ್ಲಿರುವ ಕಾಶ್ಮೀರ್ ಡೆಸ್ಕ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ ಎಂದು ವಿದೇಶ ವ್ಯವಹಾರಗಳ ರಾಜ್ಯ ಸಚಿವವಿ. ಮುರಳೀಧರನ್ ಹೇಳಿದ್ದಾರೆ.

ಕಾಶ್ಮೀರ್ ಸೆಲ್ ಅಥವಾ ಕಾಶ್ಮೀರ್ ಡೆಸ್ಕ್ ನಿಂದಾಗಿ ಯಾವ ರೀತಿಯ ಅಪಾಯ ಉಂಟಾಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಭಾರತ ವಿದೇಶ ರಾಷ್ಟ್ರಗಳಿಗೆ ಮನವಿ ಮಾಡಿದೆ.

ಸಂವಿಧಾನದ 370ನೇ ವಿಧಿಯನ್ನು ರದ್ದು ಗೊಳಿಸಿದ ಭಾರತದ ನಿರ್ಧಾರದ ಬಗ್ಗೆ ತಪ್ಪು ಮಾಹಿತಿಗಳನ್ನು ಹಬ್ಬಿಸುವುದಕ್ಕಾಗಿ ಪಾಕಿಸ್ತಾನ ಈ ರೀತಿ ಕಾಶ್ಮೀರ್ ಡೆಸ್ಕ್ ಆರಂಭಿಸಿದೆ.ಭಾರತದಆಂತರಿಕ ವಿಷಯಗಳಲ್ಲಿ ಮಧ್ಯ ಪ್ರವೇಶಿಸಲು ಪಾಕಿಸ್ತಾನ ಪ್ರಯತ್ನಿಸುತ್ತಲೇ ಇದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ವಿಷಯಗಳು ಭಾರತದ ಆಂತರಿಕ ವಿಷಯ ಎಂಬುದು ಇತರ ರಾಷ್ಟ್ರಗಳಿಗೆ ಅರ್ಥವಾಗಿದೆ ಎಂದಿದ್ದಾರೆ ಮುರಳೀಧರನ್.

ಇದನ್ನೂ ಓದಿ:ಭಾರತದಲ್ಲಿ 100 ಕೋಟಿ ಹಿಂದೂಗಳಿರುವ ಕಾರಣ ಇದು ಹಿಂದೂ ರಾಷ್ಟ್ರ : ಬಿಜೆಪಿ ಸಂಸದ

ಭಾರತದ ಆಂತರಿಕ ಸಮಸ್ಯೆಗಳಲ್ಲಿಮೂಗು ತೂರಿಸುವ ಪ್ರಯತ್ನ,ಕಾಶ್ಮೀರದಲ್ಲಿನ ಪರಿಸ್ಥಿತಿ ಮತ್ತು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಹೀಗೆಳೆಯಲು ಪಾಕಿಸ್ತಾನ ಮಾಡುತ್ತಿರುವ ಪ್ರಯತ್ನವನ್ನು ಭಾರತ ವಿಫಲಗೊಳಿಸಿದೆ.

ಜಮ್ಮು ಮತ್ತುಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ಇದು ಭಾರತದ ಆಂತರಿಕ ವಿಷಯ. ಗಡಿಭಾಗವನ್ನು ಭಯೋತ್ಪಾದನೆಗಾಗಿ ಬಳಸಬಾರದು ಎಂದು ಇತರ ರಾಷ್ಟ್ರಗಳು ಪಾಕಿಸ್ತಾನಕ್ಕೆ ಹೇಳಿವೆ. ಅಷ್ಟೇ ಅಲ್ಲದೆ ಪಾಕಿಸ್ತಾನ ಮತ್ತು ಭಾರತನಡುವೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ದ್ವಿಪಕ್ಷೀಯ ಮಾತುಕತೆ ಮತ್ತು ಶಾಂತಿಯುತ ರೀತಿಯಲ್ಲಿ ಪರಿಹರಿಸಬೇಕು ಇತರ ರಾಷ್ಟ್ರಗಳು ಪಾಕ್ಗೆ ಹೇಳಿದ್ದವು ಎಂದು ಸಚಿವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.