ನವದೆಹಲಿ: ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ. ಅವರ ಶೂಗಳಲ್ಲಿ ‘ಸ್ಮೋಕ್ ಕ್ಯಾನ್’ (ಹಳದಿ ಬಣ್ಣದ ಹೊಗೆ ಉಗುಳುವ ಕ್ಯಾನ್) ಅಡಗಿಸಿಡಲು ಅನುವಾಗುವಂತೆ ರಂಧ್ರ ಗಳನ್ನು ಮಾಡಿದ್ದ ಪಾದರಕ್ಷೆ ತಯಾರಕನ ಪತ್ತೆ ಮಾಡಲು ದೆಹಲಿ ಪೊಲೀಸರು ಲಖನೌ ಪೊಲೀಸರ ನೆರವು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವ್ಯಕ್ತಿಯನ್ನು ಈ ಪ್ರಕರಣದ ಸಾಕ್ಷಿ ದಾರರನ್ನಾಗಿ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

‘ಸೈಕಲ್ನಲ್ಲಿ ಲಖನೌನ ಅಲಂಬಾಘ್ಗೆ ಬಂದಿದ್ದ ಆರೋಪಿ ಸಾಗರ್ ಮೊದಲಿಗೆ ಸ್ಮೋಕ್ ಕ್ಯಾನ್ ಅಡಗಿಸಿಡುವ ರೀತಿಯಲ್ಲಿ ಶೂಗಳನ್ನು ವಿನ್ಯಾಸಗೊಳಿಸಲು ಯತ್ನಿಸಿದ್ದ. ಆದರೆ, ಅದು ಸಾಧ್ಯವಾಗದ ಕಾರಣ ಪಾದರಕ್ಷೆ ತಯಾರಿಸುವ ವ್ಯಕ್ತಿಗೆ ಕೋರಿಕೊಂಡಿದ್ದ. ಆತನ ಶೋಧಕ್ಕಾಗಿ ಲಖನೌಗೆ ತೆರಳಿದ್ದ ದೆಹಲಿ ಪೊಲೀಸರು, ಚಪ್ಪಲಿ ತಯಾರಿಸುವ ಹಲವು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಈ ವೇಳೆ ರಾಮನಗರದಲ್ಲಿರುವ ಸಾಗರ ಮನೆಯಲ್ಲಿ ಶೋಧ ನಡೆಸಿದ್ದ ದೆಹಲಿ ಪೊಲೀಸರು, ಒಂದು ಜೊತೆ ಶೂಗಳು, ಶೂ ತಳಭಾಗಗಳು, ಡೈರಿ, ಭಗತ್ ಸಿಂಗ್ ಕುರಿತಾದ ಕೆಲವು ಪುಸ್ತಕಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಸಂಸತ್ತಿನ ಪ್ರವೇಶದ ವೇಳೆ ಶೂ ಪರೀಕ್ಷಿಸುವುದಿಲ್ಲ ಎಂಬುದನ್ನು ಕಂಡು ಕೊಂಡು, ಶೂನಲ್ಲಿ ರಂಧ್ರ ಇರುವಂತೆ ವಿನ್ಯಾಸಗೊಳಿಸಲು ಯತ್ನಿಸಿದೆ. ಆದರೆ, ಅದು ಸಾಧ್ಯವಾಗದ ಕಾರಣ ಮನೆಯ ಹತ್ತಿರದಲ್ಲೇ ಇದ್ದ ಅಂಗಡಿಯೊಂದರಲ್ಲಿ ₹595ಕ್ಕೆ ಜೊತೆಯಂತೆ ಎರಡು ಜೊತೆ ಶೂ ಖರೀದಿಸಿ, ಅವುಗಳಲ್ಲಿ ಸ್ಮೋಕ್ ಕ್ಯಾನ್ ಅಡಗಿಸಿಡುವಂತೆ ವಿನ್ಯಾಸಗೊಳಿಸಲು ಅಲಂಬಾಗ್ನಲ್ಲಿರುವ ಚಪ್ಪಲಿ ಅಂಗಡಿಗೆ ಹೋಗಿದ್ದೆ’ ಎಂದು ವಿಚಾರಣೆ ವೇಳೆ ಆರೋಪಿ ಸಾಗರ್ ಹೇಳಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.